ಚಲಿಸುತ್ತಿದ್ದ ವೇಳೆ ರೈಲಿನಿಂದ ಬೇರ್ಪಟ್ಟ ಎರಡು ಬೋಗಿಗಳು: ತಪ್ಪಿದ ಅನಾಹುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಚೆನ್ನೈನಿಂದ ಕೊಯಮತ್ತೂರಿಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ ಎರಡು ಬೋಗಿಗಳು ಬೇರ್ಪಟ್ಟಿವೆ. ವೇಗವಾಗಿ ಚಲಿಸುತ್ತಿದ್ದ ರೈಲು ಎರಡು ಬೋಗಿಗಳನ್ನು ಬಿಟ್ಟು ಬಹಳ ದೂರ ಸಾಗಿತ್ತು. ಆ ಎರಡು ಬೋಗಿ ಬೇರ್ಪಡುವುದನ್ನು ಗಮನಿಸಿದ ಲೋಕೋ ಪೈಲಟ್ ಮುಂದಿನ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಲು ಸೂಚಿಸಿದರು. ಸ್ವಲ್ಪ ದೂರ ಚಲಿಸಿದ ಬಳಿಕ ಬೋಗಿಗಳು ಹಳಿಗಳ ಮೇಲೆ ಯಾವುದೇ ಅಪಾಯವಿಲ್ಲದೆ ನಿಂತವು. ಯಾವುದೇ ಅವಘಡ ಸಂಭವಿಸದ ಕಾರಣ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಶನಿವಾರ ರಾತ್ರಿ 11 ಗಂಟೆಗೆ ಎಕ್ಸ್‌ಪ್ರೆಸ್ ರೈಲು ಚೆನ್ನೈನಿಂದ ಕೊಯಮತ್ತೂರಿಗೆ ಹೋಗುತ್ತಿತ್ತು. ತಿರುವಳ್ಳೂರು ನಿಲ್ದಾಣವನ್ನು ದಾಟುತ್ತಿದ್ದಾಗ ಪ್ರಯಾಣಿಕರಿಗೆ ದೊಡ್ಡ ಶಬ್ದ ಕೇಳಿಸಿತು. ಬೋಗಿಗಳನ್ನು ಸಂಪರ್ಕಿಸುವ ಕಪ್ಲಿಂಗ್ ಪಿನ್ ಬಿದ್ದುಹೋಗಿದೆ ಇದರಿಂದಾಗಿ ಎಸ್7 ಮತ್ತು ಎಸ್8 ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ.

ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎರಡು ಬೋಗಿಗಳನ್ನು ರೈಲಿಗೆ ಮರು ಜೋಡಿಸಿದರು. ಕಪ್ಲಿಂಗ್ ಪಿನ್ ಬಿದ್ದುಹೋದ್ದರಿಂದ ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!