ಪೇಪರ್‌ ಎಸೆದಂತೆ ರೈಲಿನಿಂದ ಯುವಕನನ್ನು ತಳ್ಳಿದ ವ್ಯಕ್ತಿ: ಭಯಾನಕ ವಿಡಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಬ್ಬರು ಪ್ರಯಾಣಿಕರ ನಡುವಿನ ಮಾರಾಮಾರಿ ನಡೆದು ಯುವಕನನ್ನು ವ್ಯಕ್ತಿಯೊಬ್ಬ ಚಲಿಸುವ ರೈನಿಂದ ತಳ್ಳಿರುವ ಭಯಾನಕ ಗಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌರಾ-ಮಾಲ್ಡಾ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಿರ್ಭೂಮ್ ಜಿಲ್ಲೆಯ ತಾರಾಪಿತ್ ರಸ್ತೆ-ರಾಮ್‌ಪುರಹತ್ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ.

ರೈಲಿನಿಂದ ಬಿದ್ದ ವ್ಯಕ್ತಿಯನ್ನು ಸಜಲ್ ಶೇಖ್ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ರೈಲಿನಲ್ಲಿದ್ದ ಇತರ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ವರ್ತಿಸಿದ್ದು, ಮಹಿಳಾ ಪ್ರಯಾಣಿಕರಿಗೆ ಬೆದರಿಕೆ ಹಾಕುವುದು, ಸಹಪ್ರಯಾಣಿಕರ ಕಾಲೆಳೆಯುಂತೆ ಮಾತನಾಡುವುದು, ಇತರರಿಗೆ ಕರೆ ಮಾಡಿ ಬೆದರಿಕೆ ಹಾಕುವ ಹಾಗೆ ಗೊಂದಲದ ವಾತಾವರಣ ಸೃಷ್ಟಿಸಿದ್ದ. ಇದರಿಂದ ಬೇಸತ್ತ ಸಹ ಪ್ರಯಾಣಿಕರು ಆತನೊಂದಿಗೆ ಜಗಳಕ್ಕಿಳಿದು, ಈ ವೇಳೆ ವ್ಯಕ್ತಿಯೊಬ್ಬ ಆತನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಸಜಲ್‌ ಶೇಖ್‌ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ. ಇತ್ತ ರೈನಿಂದ ತಳ್ಳಿದ ವ್ಯಕ್ತಿ ಏನೂ ನಡೆದಿಲ್ಲವೆಂಬಂತೆ ಬಂದು ತನ್ನ ಸೀಟಿನಲ್ಲಿ ಕುಳಿತಿದ್ದಾನೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!