ಐವರಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಖಾಸಗಿ ಅಂಗಕ್ಕೆ ರಾಡ್, ಮರುಕಳಿಸಿದ ನಿರ್ಭಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಿಯಾಬಾದ್‌ನ ರಾಜ್‌ನಗರ ಬಡಾವಣೆಯಲ್ಲಿ ಮಹಿಳೆ ಮೇಲೆ ಐವರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ವಾಹನದೊಳಗೆ ಐವರು 38 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.

ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿ ಗಾಜಿಯಾಬಾದ್‌ನಿಂದ ರಾತ್ರಿ ಹಿಂದಿರುಗುವಾಗ ಆಕೆಯನ್ನು ಕಾರಿನಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ. ಐವರು ಎರಡು ದಿನ ಸತತವಾಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆಕೆಯ ಖಾಸಗಿ ಭಾಗಗಳಿಗೆ ರಾಡ್ ಹಾಕಿದ್ದು, ಖಾಸಗಿ ಅಂಗದೊಳಗೆ ರಾಡ್ ಇದ್ದಂತೆಯೇ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!