ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್‌ ಅಬ್ಬರ: ಪಾರ್ಟ್‌ 2 ನತ್ತ ಶಾರುಖ್‌ ಖಾನ್‌ ಚಿತ್ತ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶಾರುಖ್‌ ಖಾನ್‌ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್‌ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂ.ಗಿಂತ ಹೆಚ್ಚಿನ ಹಣ ಬಾಚಿದೆ.

ಈ ಸಂಭ್ರಮವನ್ನು ಶಾರುಖ್‌ ಖಾನ್‌ ಸೇರಿ ಸಿನಿಮಾದ ತಾರಾಗಣವು ಆಚರಿಸಿಗೊಂಡಿದ್ದು, ಈ ವೇಳೆ ಪಠಾಣ್‌ ಪಾರ್ಟ್‌ 2 ಕುರಿತು ಶಾರುಖ್‌ ಖಾನ್‌ ಮಹತ್ವದ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಿನಿಮಾ ಯಶಸ್ಸಿನ ಕುರಿತು ಮಾತನಾಡುವಾಗ, ಪಠಾಣ್‌ ಪಾರ್ಟ್‌ 2 ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ ಶಾರುಖ್‌ ಖಾನ್‌, “ಪಠಾಣ್‌ ಸಿನಿಮಾದ ಯಶಸ್ಸು ನಮಗೆ ಸಂತಸ ತಂದಿದೆ. ಇದು ನಮಗೆ, ನಮ್ಮ ಕುಟುಂಬಕ್ಕೆ ತುಂಬ ಸಂತೋಷ ತಂದುಕೊಟ್ಟ ದಿನ. ಪಠಾಣ್‌ ಸಿನಿಮಾದ ಎರಡನೇ ಭಾಗ ನಿರ್ದೇಶನ ಮಾಡುತ್ತೇನೆ ಎಂದು ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ಹೇಳಿದರೆ, ನಾನು ಖಂಡಿತವಾಗಿಯೂ ಮಾಡುತ್ತೇನೆ. ಪಠಾಣ್‌ 2 ಸಿನಿಮಾದಲ್ಲಿಯೂ ನಟಿಸುವುದು ನನಗೆ ಇಷ್ಟ” ಎಂದು ಹೇಳಿದ್ದಾರೆ. ‌

ಪಠಾಣ್‌ ಸಿನಿಮಾದ ಹಾಡು ವಿವಾದಕೆ ಕುರಿತುಮಾತನಾಡಿದ ಶಾರುಖ್‌ ಖಾನ್‌ , ನಮಗೆ ಯಾರ ಮನಸ್ಸಿಗೂ ನೋವುಂಟು ಮಾಡುವ, ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿಲ್ಲ. ಸಿನಿಮಾ, ಆ ಪಾತ್ರ ಏನು ಬಯಸುತ್ತದೆಯೋ, ಅದನ್ನು ಪ್ರೀತಿಯಿಂದ ಮಾಡುತ್ತೇವೆ. ಸಿನಿಮಾದಿಂದ ಪ್ರೀತಿಯನ್ನು ಹಂಚುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಪಠಾಣ್‌ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌, ನಟಿ ದೀಪಿಕಾ ಪಡುಕೋಣೆ, ನಟ ಜಾನ್‌ ಅಬ್ರಾಹಂ ಅವರು ಕೂಡ ಪಠಾಣ್‌ ಸಿನಿಮಾದ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!