ರಿಲೀಸ್‌ಗೂ ಮುನ್ನವೇ ಓಟಿಟಿಗೆ ಮಾರಾಟವಾದ ಪಠಾಣ್‌ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ನಟ ಶಾರುಖ್ ಖಾನ್‌ ಅಭಿನಯದ ಪಠಾಣ್ ಸಿನಿಮಾ ವಿರುದ್ಧ ದೇಶ ವ್ಯಾಪ್ತಿ ಆಕ್ರೋಶ ವ್ಯಕ್ತವಾಗುತ್ತಿದ್ದು, ರಿಲೀಸ್‌ಗೂ ಮುನ್ನವೇ ವಿವಾದಗಳಿಂದ ಸುತ್ತುವರಿದೆ.

ಇದರ ನಡುವೆ ಇದೀಗ ಪಠಾಣ್‌ ಚಿತ್ರದ ಓಟಿಟಿ ಹಕ್ಕು ಮಾರಾಟವಾಗಿದೆ.

ಪಠಾಣ್ ಚಿತ್ರ 2023ರ ಜನವರಿ 25ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಬಳಿಕ OTT ನಲ್ಲಿಯೂ ಸಿನೆಮಾವನ್ನು ವೀಕ್ಷಿಸಬಹುದು. ಈ ಹಕ್ಕನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ.

ಮಾರ್ಚ್ ಕೊನೆಯಲ್ಲಿ ಅಥವಾ ಏಪ್ರಿಲ್ ಆರಂಭದಲ್ಲಿ ಪಠಾಣ್ ಸಿನೆಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ ಈ ಚಿತ್ರದ ಜಾಗತಿಕ OTT ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ 100 ಕೋಟಿ ರೂಪಾಯಿಗೆ ಖರೀದಿಸಿದೆಯಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!