ಸ್ಟಾಲಿನ್ ಸರಕಾರದಿಂದ ಭರ್ಜರಿ ಗಿಫ್ಟ್: ಪಡಿತರ ಚೀಟಿದಾರರಿಗೆ ಸಿಗಲಿದೆ 1000 ರೂ.!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ತಮಿಳುನಾಡು ಸರ್ಕಾರ ಪಡಿತರ ಚೀಟಿದಾರರಿಗೆ ಸಿಹಿ ಸುದ್ಧಿ ನೀಡಿದ್ದು, ನಿಮ್ಮ ಬಳಿಯೂ ಪಡಿತರ ಚೀಟಿ ಇದ್ದರೆ ಸರ್ಕಾರದಿಂದ ಜನವರಿ ತಿಂಗಳಲ್ಲಿ 1000 ರೂ. ರೂಪಾಯಿ ನೀಡುವಂತೆ ಘೋಷಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಂದಿನ ತಿಂಗಳು ಪೊಂಗಲ್ ಹಬ್ಬದಂದು ಪಡಿತರ ಚೀಟಿದಾರರಿಗೆ 1,000 ರೂಪಾಯಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಅಕ್ಕಿ, ಸಕ್ಕರೆ ಮುಂತಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

ಸರ್ಕಾರದ ಹೇಳಿಕೆ ಪ್ರಕಾರ, 1000 ರೂಪಾಯಿ ನೀಡುವುದರ ಜೊತೆಗೆ, ಫಲಾನುಭವಿಗಳಿಗೆ ಒಂದು ಕೆಜಿ ಅಕ್ಕಿ ಮತ್ತು ಒಂದು ಕೆಜಿ ಸಕ್ಕರೆಯನ್ನು ಸಹ ನೀಡಲಾಗುತ್ತದೆ.

ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಸುಮಾರು 2.19 ಕೋಟಿ ಕಾರ್ಡ್‌ದಾರರು ಪ್ರಯೋಜನ ಪಡೆಯಲಿದ್ದಾರೆ. ಬೊಕ್ಕಸಕ್ಕೆ ಸುಮಾರು 2356.67 ಕೋಟಿ ರೂ. ಹೊರೆ ಬೀಳಲಿದೆ. ಜನವರಿ 2 ರಂದು ಸ್ಟಾಲಿನ್ ಪೊಂಗಲ್ ಉಡುಗೊರೆ ಯೋಜನೆಗೆ ಚಾಲನೆ ನೀಡಲಿದ್ದು, ಜನವರಿ 15 ರಂದು ಹಬ್ಬ ಆಚರಿಸಲಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!