BOLLYWOOD | 50 ದಿನ ಪೂರೈಸಿದ ಪಠಾಣ್, 20 ದೇಶದಲ್ಲಿ ಇನ್ನೂ ಪ್ರದರ್ಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದ ಶಾರುಖ್ ಕಂ ಬ್ಯಾಕ್ ಸಿನಿಮಾ ಪಠಾಣ್ 50 ದಿನ ಪೂರೈಸಿದೆ. ಭರ್ಜರಿ ಹಿಟ್ ಆದ ಸಿನಿಮಾ ಇನ್ನೂ 20 ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದೆ, ಎಷ್ಟೇ ಹೊಸ ಸಿನಿಮಾಗಳು ಬಂದರೂ ಪಠಾಣ್ ಸದ್ದಿಲ್ಲದೇ ಮುನ್ನುಗ್ಗುತ್ತಿದೆ.

ಆರಂಭದಲ್ಲಿ ಪಠಾಣ್ ಮುಗ್ಗರಿಸಬಹುದೇನೋ ಎನ್ನುವ ಭೀತಿ ಕಾಡಿತ್ತು, ಕೇಸರಿ ಬಿಕಿನಿ ವಿವಾದ ಹಾಗೂ ಪಠಾಣ್ ಹೆಸರಿನ ವಿವಾದದಿಂದಾಗಿ ಸಿನಿಮಾ ಮೇಲೆ ನೆಗೆಟಿವ್ ಇಂಪ್ಯಾಕ್ಟ್ ಬೀರಲಿದೆ ಎನ್ನಲಾಗಿತ್ತು. ಆದರೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ್ದು, ನಿರ್ದೇಶಕ ಆನಂದ್ ಟ್ವೀಟ್ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!