ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಫ್ಲಾಪ್ ಸಿನಿಮಾಗಿಂದ ಕುಗ್ಗಿದ್ದ ಶಾರುಖ್ ಪಠಾಣ್ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಪಠಾಣ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿದ್ದು, ಬಾಲಿವುಡ್‌ಗೆ ಭರವಸೆ ಸಿಕ್ಕಂತಾಗಿದೆ. ಸೌತ್ ಸಿನಿಮಾಗಳ ಮುಂದೆ ಡಲ್ ಹೊಡೆಯುತ್ತಿದ್ದ ಬಾಲಿವುಡ್‌ಗೆ ಪಠಾಣ್ ಭರವಸೆಯ ಬೆಳಕಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ರಾಜ್‌ಕುಮಾರ್ ರಾವ್ ಇದೀಗ ಶಾರುಖ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಗೆದ್ದಿದ್ದು, ಇಡೀ ಬಾಲಿವುಡ್ ಗೆದ್ದಷ್ಟೇ ಖುಷಿ. ಅವರು ಈ ಗೆಲುವನ್ನು ಡಿಸರ್ವ್ ಮಾಡುತ್ತಾರೆ ಎಂದಿದ್ದಾರೆ. ಶಾರುಖ್ ಮನೆಗೆ ಯಾರೇ ಹೋದರೂ ಮೂರನೇ ಫ್ಲೋರ್‌ನಿಂದ ಇಳಿದು ಬಂದು ಬೈ ಬೈ ಹೇಳ್ತಾರೆ. ನಮ್ಮನ್ನು ಕಾರ್‌ನಲ್ಲಿ ಕೂರಿಸಿ ನಾವು ಹೋಗೋವರೆಗೂ ಅಲ್ಲೇ ನಿಲ್ತಾರೆ. ಅವರು ಇಷ್ಟೆಲ್ಲಾ ಮಾಡಬೇಕಿಲ್ಲ ಆದರೆ ಮಾಡುತ್ತಾರೆ. ಅವರ ಸಿನಿಮಾ ಈ ಮಟ್ಟಿನ ಯಶಸ್ಸು ಪಡೆದಿದ್ದು ಖುಷಿ ಎಂದಿದ್ದಾರೆ.