ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರೇಮಕಥೆ ಯಾವ ಸಿನಿಮಾಗಿಂತ ಕಡಿಮೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಸದ್ದು ಮಾಡಿತ್ತು.
ಪತ್ನಿಗೆ ಡಿವೋರ್ಸ್ ನೀಡದೇ ನರೇಶ್ ಪವಿತ್ರಾ ಲೋಕೇಶ್ರನ್ನು ಮದುವೆಯಾದ ವಿಡಿಯೋವನ್ನು ನರೇಶ್ ಹಂಚಿಕೊಂಡು ಆಶೀರ್ವದಿಸಿ ಎಂದಿದ್ದರು.
ಯಾವ ವಯಸ್ಸಿನಲ್ಲಿ ಮದುವೆಯಾದರೇನು ಪ್ರೀತಿ ಮುಖ್ಯ ಎಂದ ನೆಟ್ಟಿಗರು ಹೊಸ ಜೋಡಿಗೆ ಶುಭ ಹಾರೈಸಿದ್ದರು. ಆದರೆ ಇದೆಲ್ಲಾ ಸಿನಿಮಾ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ ಎಂಬುದಾಗಿ ತಿಳಿದುಬಂದಿದೆ.
ಮತ್ತೆ ಮದುವೆ ಎನ್ನುವ ಸಿನಿಮಾ ಪ್ರಮೋಷನ್ಗಾಗಿ ಈ ಗಿಮಿಕ್ ಮಾಡಲಾಗಿದೆ. ಸಿನಿಮಾದ ಸೀನ್ನ್ನೇ ಮದುವೆ ಎಂದು ಎಲ್ಲೆಡೆ ಪ್ರಚಾರ ಮಾಡಲಾಗಿತ್ತು. ಮೇನಲ್ಲಿ ಮತ್ತೆ ಮದುವೆ ರಿಲೀಸ್ ಆಗಲಿದೆ.