ಪೆನ್ಸಿಲ್ವೇನಿಯಾ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸ್ಫೋಟ : ಇಬ್ಬರು ಸಾವು, ಒಂಬತ್ತು ಮಂದಿ ಕಾಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪೆನ್ಸಿಲ್ವೇನಿಯಾದ ವೆಸ್ಟ್ ರೀಡಿಂಗ್‌ನಲ್ಲಿರುವ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ ಪರಿಣಾಮ ಇಬ್ಬರು ಸಾವು ಮತ್ತು ಒಂಬತ್ತು ಮಂದಿ ಕಾಣೆಯಾಗಿಯಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಸಂಜೆ 5 ಗಂಟೆ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಒಂದು ಕಟ್ಟಡ ನಾಶಗೊಂಡಿದ್ದು, ಇನ್ನೊಂದು ಕಟ್ಟಡಕ್ಕೆ ಹಾನಿಯಾಗಿದೆ. ಫಿಲಡೆಲ್ಫಿಯಾದ ವಾಯುವ್ಯಕ್ಕೆ 60 ಮೈಲುಗಳಷ್ಟು ದೂರದಲ್ಲಿರುವ ವೆಸ್ಟ್ ರೀಡಿಂಗ್‌ನಲ್ಲಿರುವ ಪಾಲ್ಮರ್ ಕಂ ಚಾಕೊಲೇಟ್ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿತ್ತು ಎಂದು ಪೊಲೀಸ್ ಮುಖ್ಯಸ್ಥ ವೇಯ್ನ್ ಹೋಲ್ಬೆನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಫೋಟದ ಕಾರಣವನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!