CINE| ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಪವನ್ ಕಲ್ಯಾಣ್ ಹುಟ್ಟುಹಬ್ಬ, ಈ ವಿಡಿಯೋ ನೋಡಿದ್ರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನಿನ್ನೆ ಸೆಪ್ಟೆಂಬರ್ 2 ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬವಾಗಿದ್ದರಿಂದ ಎರಡು ತೆಲುಗು ರಾಜ್ಯಗಳಲ್ಲಿ ಅಭಿಮಾನಿಗಳೊಂದಿಗೆ ಜನಸೇನಾ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬಕ್ಕೆ ಅನೇಕ ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಕೂಡ ಶುಭ ಹಾರೈಸಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿಯೂ ಪವನ್ ಅಭಿಮಾನಿಗಳು ಪವನ್ ಕಲ್ಯಾಣ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಅಮೆರಿಕದಲ್ಲಿ ನ್ಯೂಯಾರ್ಕ್ ಟೈಮ್ ಸ್ಕ್ವೇರ್ ನಲ್ಲಿ ಪವನ್ ಅಭಿಮಾನಿಗಳು ಒಟ್ಟಾಗಿ ಪವನ್ ಹುಟ್ಟುಹಬ್ಬ ಆಚರಿಸಿದ್ದು, ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ವಿಶೇಷ ವೀಡಿಯೊವನ್ನು ಪ್ಲೇ ಮಾಡಲಾಗಿತ್ತು.

ನ್ಯೂಯಾರ್ಕ್‌ನ ಪ್ರಸಿದ್ಧ ಸ್ಥಳವಾದ ಟೈಮ್ ಸ್ಕ್ವೇರ್‌ನಲ್ಲಿ ಇತ್ತೀಚೆಗೆ ನಮ್ಮ ಭಾರತೀಯರು ತಮ್ಮ ನೆಚ್ಚಿನ ನಾಯಕರ ವಿಶೇಷ ದಿನಗಳು ಮತ್ತು ನಮ್ಮ ಹಬ್ಬಗಳ ವೀಡಿಯೊಗಳನ್ನು ಪ್ಲೇ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಈಗ ಪವನ್‌ ಅಭಿಮಾನಿಗಳು ಈ ಹಾದಿ ತುಳಿದಿದ್ದು, ವಿಡಿಯೋ ಬರುತ್ತಿದ್ದಂತೆ ಪವರ್‌ ಸ್ಟಾರ್..ಪವರ್‌ ಸ್ಟಾರ್‌ ಎಂಬ ಘೋಷಣೆಗಳು ಮೊಳಗಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!