ಬೆಂಗಳೂರಿನ ಗೋಡೆಗಳ ಮೇಲೆ ಪೇ-ಸಿಎಂ ಪೋಸ್ಟರ್, ಎಫ್‌ಐಆರ್ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಗೋಡೆಗಳ ಮೇಲೆ ಕಾಂಗ್ರೆಸ್ ಪೇ-ಸಿಎಂ ಪೋಸ್ಟರ್‌ಗಳನ್ನು ಅಂಟಿಸಿದ್ದು, ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪೋಸ್ಟರ್ ಅಂಟಿಸಿದವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಗರದಾದ್ಯಂತ ಕ್ಯೂಆರ್ ಕೋಡ್ ಇರುವ ಪೇ-ಸಿಎಂ ಪೋಸ್ಟರ್‌ಗಳನ್ನು ಅಂಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.
ಇದನ್ನು ಸ್ಕ್ಯಾನ್ ಮಾಡಿದರೆ ಬಳಕೆದಾರರ ದೂರುಗಳಿಗಾಗಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ 40% ಕಮಿಷನ್ ಸರ್ಕಾರ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.

ಈ ಬಗ್ಗೆ ಪ್ರಿಯಾಂಖ್ ಖರ್ಗೆ ಮಾತನಾಡಿದ್ದು, ಇದು ವೈಯಕ್ತಿಕ ದಾಳಿ ಅಲ್ಲ, ವೆಬ್ ಸೈಟ್ ಹ್ಯಾಕ್ ಮಾಡಬಹುದು, ಪೋಸ್ಟರ್ ಹರಿಯಬಹುದು ಆದರೆ ಚರ್ಚೆ ಮಾಡಲು ಯಾರೂ ಮುಂದೆ ಬರೋದಿಲ್ಲ, ಇದು ಅಭಿಯಾನ ಅಷ್ಟೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!