Sunday, September 25, 2022

Latest Posts

ರಾಕಿಂಗ್‌ ಸ್ಟಾರ್‌ಗಾಗಿ ಸಾವಿರ ಕೋಟಿ ಬಜೆಟ್‌ ಸಿನಿಮಾ ರೆಡಿ ಮಾಡಿದ್ರಾ ನಿರ್ದೇಶಕ ಶಂಕರ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಡಿಯನ್-2 ಮತ್ತು ಆರ್‌ಸಿ -15 ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಂಕರ್, ಈ ಸಿನಿಮಾಗಳ ನಂತರ ಯಶ್ ಜೊತೆ ದೊಡ್ಡ ಸಿನಿಮಾ ಮಾಡಲು ಮುಂದಾಗಿದ್ದಾರೆ. ‘ಕೆಜಿಎಫ್’ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್ ಆದ ಯಶ್, 1200 ಕೋಟಿ ಕಲೆಕ್ಷನ್ ಮಾಡಿ ಭಾರತದಾದ್ಯಂತ ಬ್ಲಾಕ್ ಬಸ್ಟರ್ ಕಲೆಕ್ಷನ್ ಪಟ್ಟಿಗೆ ಸೇರಿಸಿದ್ದಾರೆ. ಇಷ್ಟು ದೊಡ್ಡ ನಿರ್ದೇಶಕ ಮತ್ತು ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸ್ಟಾರ್ ಹೀರೋ ಯಶ್ ಕಾಂಬಿನೇಷನ್ ನಲ್ಲಿ ಸಿನಿಮಾ ಇನ್ನೆಷ್ಟು ಅದ್ಧೂರಿಯಾಗಿ ಮೂಡಿಬರಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾದಿದ್ದಾರೆ.

ಶಂಕರ್ ಕಾಂಬಿನೇಷನ್ ನಲ್ಲಿ ಇದು ಯಶ್ ಒಬ್ಬರೇ ಹೀರೋ ಆಗಿರುವ ಚಿತ್ರವಲ್ಲ ತಮಿಳು, ಕನ್ನಡ, ಮಲಯಾಳಂ, ತೆಲುಗು ಸ್ಟಾರ್ ಗಳನ್ನು ಸೇರಿಸಿ ಅದ್ಧೂರಿ ಮಲ್ಟಿ ಸ್ಟಾರರ್ ಗೆ ಶಂಕರ್ ಪ್ಲಾನ್ ಮಾಡುತ್ತಿದ್ದಾರೆ. ಈ ಸಿನಿಮಾ ಐತಿಹಾಸಿಕ ಆ್ಯಕ್ಷನ್ ಡ್ರಾಮಾ ಆಗಲಿದೆ. ಈ ದೊಡ್ಡ ಸಿನಿಮಾಕ್ಕಾಗಿ ಕರಣ್ ಜೋಹರ್ ಜೊತೆಗೆ ಎಲ್ಲಾ ಸ್ಟಾರ್ ನಿರ್ಮಾಪಕರನ್ನು ಶಂಕರ್ ಭೇಟಿಯಾಗಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸಾವಿರಾರು ಕೋಟಿ ಬಜೆಟ್‌ನಲ್ಲಿ ಇಂತಹ ಅದ್ಧೂರಿ ಸಿನಿಮಾ ತಯಾರಾಗುತ್ತಿದೆ.‌ ದಕ್ಷಿಣದ ಹಲವು ಸೂಪರ್‌ಸ್ಟಾರ್‌ಗಳನ್ನು ಮೂಲಕ ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರ ತಯಾರಾಗಲಿದೆ ಎಂಬ ಗಾಸಿಪ್ ಕೇಳಿಬರುತ್ತಿದೆ. ನಿರ್ದೇಶಕ ಶಂಕರ್ ವೈವಿಧ್ಯಮಯ ಕಥೆಗಳನ್ನು ಪ್ರದರ್ಶಿಸಲು ಹೆಸರುವಾಸಿಯಾಗಿದ್ದಾರೆ. ಈ ಸುದ್ದಿ ಎಷ್ಟು ಸತ್ಯ ಎಂದು ಕಾದು ನೋಡಬೇಕು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!