ಶೇ.22 ರಷ್ಟು ವೇತನ ಹೆಚ್ಚಳ ಮಾಡಿ ಇಲ್ಲವೇ ಗುರುವಾರದಿಂದ ಮುಷ್ಕರ: ಸರಕಾರಕ್ಕೆ KPTCL ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್ 

ರಾಜ್ಯ ಸರಕಾರ ಶೇ.20 ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದ್ದರೂ ಶೇ.22 ರಷ್ಟು ವೇತನ ಹೆಚ್ಚಳ ಮಾಡಲೇಬೇಕು ಎಂದು ಕೆಪಿಟಿಸಿಎಲ್‌ ನೌಕರರ ಸಂಘ ಮತ್ತು ವಿವಿಧ ಎಸ್ಕಾಂಗಳ ಅಧಿಕಾರಿಗಳು, ನೌಕರರ ಒಕ್ಕೂಟ (KPTCL Strike) ಪಟ್ಟು ಹಿಡಿದಿವೆ.

ಬುಧವಾರ ರಾತ್ರಿ 12 ಗಂಟೆಯೊಳಗೆತಮ್ಮ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಲಿಖಿತ ರೂಪದ ಆದೇಶವನ್ನು ನೀಡದಿದ್ದರೆ ಮಾರ್ಚ್‌ 16ರಿಂದ ಮುಷ್ಕರಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿವೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಲ್‌) ಮತ್ತು ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂಗಳ) ಅಧಿಕಾರಿಗಳು ಮತ್ತು ನೌಕರರ ಒಕ್ಕೂಟ ಶೇ.40 ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದವು. ಆದರೆ ಸರ್ಕಾರ ಶೇ.20ರಷ್ಟು ಹೆಚ್ಚು ಮಾಡಲು ಒಪ್ಪಿಗೆ ಸೂಚಿಸಿದೆ. ಆದರೆ, ಇದು ನೌಕರರಿಗೆ ಅತೃಪ್ತಿ ತಂದಿದೆ. ನಮಗೆ ಶೇ. 22ರಷ್ಟು ಹೆಚ್ಚಳ ಮಾಡಬೇಕೆಂದು ಬೇಡಿಕೆ ಇಟ್ಟಿದ್ದೇವೆ ಎಂದು ಕೆಪಿಟಿಸಿಎಲ್‌ ನೌಕರರ ಸಂಘ ತಿಳಿಸಿದೆ.

ಸರ್ಕಾರಕ್ಕೆ ಬುಧವಾರ ರಾತ್ರಿ 12 ಗಂಟೆಯವರೆಗೆ ಡೆಡ್ ಲೈನ್ ಕೊಟ್ಟಿದ್ದೇವೆ. ಸರ್ಕಾರ ಲಿಖಿತ ರೂಪದ ಆದೇಶ ನೀಡದಿದ್ದರೆ ನಾಳೆಯಿಂದ (ಮಾ.16ರಿಂದ) ಮುಷ್ಕರಕ್ಕೆ ಸಿದ್ಧರಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!