Tuesday, March 28, 2023

Latest Posts

ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾದ ಮಹಾರಾಷ್ಟ್ರ ಮಾಜಿ ಸಚಿವ ದೀಪಕ್ ಸಾವಂತ್!

ಹೊಸದಿಗಂತ ಡಿಜಿಟಲ್ ಡೆಸ್ಕ್
 
ಮಹಾರಾಷ್ಟ್ರದ (Maharashtra) ಮಾಜಿ ಸಚಿವ ದೀಪಕ್ ಸಾವಂತ್ (Deepak Sawant) ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾಗೆ ಸೇರ್ಪಡೆಯಾಗಿದ್ದಾರೆ.
ಇದರಿಂದ ಉದ್ಧವ್ ಠಾಕ್ರೆ(Uddhav Thackeray) ನೇತೃತ್ವದ ಶಿವಸೇನೆಗೆ (ಯುಬಿಟಿ)ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಮುಂಬೈನ ಮೇಡಮ್ ಕಾಮಾ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿ ಬಾಳಾಸಾಹೇಬ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಂತ್ ಶಿಂಧೆ ಟೀಂ ಸೇರಿದ್ದಾರೆ. ಮೂರು ಬಾರಿ ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಸಾವಂತ್ ಅವರನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಮಾರಂಭದಲ್ಲಿ ಸ್ವಾಗತಿಸಿದ್ದಾರೆ .

ಈ ವಾರ ಪಕ್ಷಕ್ಕೆ ಸೇರ್ಪಡೆಯಾದ ಎರಡನೇ ಪ್ರಮುಖ ನಾಯಕರಾಗಿದ್ದಾರೆ ಸಾವಂತ್. ಸೋಮವಾರ, ಶಿವಸೇನಾ (ಯುಬಿಟಿ) ನಾಯಕ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಏಕನಾಥ್ ಶಿಂಧೆ ಬಣ ಸೇರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!