ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟರು, ಟಾಲಿವುಡ್ ನಟ ಬಾಲಕೃಷ್ಣ ಅವರನ್ನು ನೋಡಿ ಕಲಿಯಬೇಕಾದ್ದು ಬಹಳಷ್ಟಿದೆ ಎಂದು ನಟಿ ಪಾಯಲ್ ಘೋಷ್ ಹೇಳಿರುವ ಕಮೆಂಟ್‌ಗಳು ಸದ್ಯ ವೈರಲ್ ಆಗುತ್ತಿವೆ. ಪ್ರಯಾಣಂ, ಊಸರವಲ್ಲಿ ಚಿತ್ರಗಳ ಮೂಲಕ ಹೆಸರು ಮಾಡಿದ್ದ ನಾಯಕಿ, ಸದ್ಯ ಸಿನಿಮಾದಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.
ಬಾಲಿವುಡ್ ಬಗ್ಗೆ ಯಾವುದಾದರೊಂದು ಟೀಕೆ ಮಾಡುವ ನಟಿ ಇದೀಗ, ಬಾಲಯ್ಯ ಬಾಬು ಬಗ್ಗೆ ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಾಲಕೃಷ್ಣ ಜೊತೆಗಿನ ಫೋಟೋ ಶೇರ್ ಮಾಡುತ್ತಾ, ಬಾಲಿವುಡ್ ನಟರು ಬಾಲಕೃಷ್ಣ ಸರ್ ಅವರನ್ನು ನೋಡಿ ಕಲಿಯಬೇಕು. ಈ ವಯಸ್ಸಿನಲ್ಲೂ ಸರಣಿ ಹಿಟ್‌ಗಳನ್ನು ನೀಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ಅನೇಕರು ಬಾಲಯ್ಯ ಅಭಿಮಾನಿಗಳು ಖುಷಿಯಿಂದ ಕಾಮೆಂಟ್ ಮಾಡುತ್ತಿದ್ದರೆ, ಬಾಲಿವುಡ್ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.
ಪಾಯಲ್ ಘೋಷ್ ಪ್ರಸ್ತುತ ವೀಡಿಯೊ ಆಲ್ಬಂ, ಯೂಟ್ಯೂಬ್ ಮತ್ತು OTT ಸರಣಿಗಳಲ್ಲಿ ನಟಿಸುತ್ತಿದ್ದು, ಚಲನಚಿತ್ರ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.