ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಪಾವತಿ ಕಂಪನಿ ಪೇಟಿಎಂ ಸುಮಾರು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಕೃತಕ ಬುದ್ದಿಮತ್ತೆ (AI) ಉಪಯೋಗಿಸಿಕೊಂಡು ರೂಪಿಸಿರುವ ಯಾಂತ್ರೀಕೃತ ವ್ಯವಸ್ಥೆಯೇ ಹಲವು ಕೆಲಸಗಳನ್ನು ಮಾಡುತ್ತದೆ.
ಪುನರಾವರ್ತಿತ ಕೆಲಸಗಳನ್ನು ಮನುಷ್ಯರಿಗಿಂತ ಎಐ ವ್ಯವಸ್ಥೆ ಪರಿಣಾಮಕಾರಿಯಾಗಿ ಮಾಡಬಲ್ಲದು. ಹೀಗಾಗಿ ತಮ್ಮ ಕೆಲಸದ ಪಡೆಯ ಶೇ. 10 ರಿಂದ 15ರಷ್ಟು ನೌಕರರ ಅಗತ್ಯ ಇಲ್ಲವಾಗಿದೆ ಎಂದು ಪೇಟಿಎಂ ಹೇಳಿದೆ.
ಪೇಟಿಎಂನ ಸೇಲ್ಸ್ ಹಾಗೂ ಎಂಜಿನಿಯರಿಂಗ್ ವಿಭಾಗಗಳಲ್ಲಿರುವವರು ಕೆಲಸ ಕಳೆದುಕೊಂಡವರ ಪಟ್ಟಿಯಲ್ಲಿದ್ದಾರೆ.