ಮಲಗಿದ ಕೂಸಿನ ಮೂಗಿಗೆ ಕಚ್ಚಿದ ಇಲಿ, ತೀವ್ರ ರಕ್ತಸ್ರಾವದಿಂದ ಕಂದಮ್ಮ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

40 ದಿನದ ಹಸುಗೂಸಿಗೆ ಇಲಿ ಕಚ್ಚಿದ್ದು, ಅತಿಯಾದ ರಕ್ತಸ್ರಾವದಿಂದ ಕಂದಮ್ಮ ಮೃತಪಟ್ಟಿದೆ.

ಕರ್ನೂಲ್ ಜಿಲ್ಲೆಯ ನಾಗನೂಲು ಗ್ರಾಮದಲ್ಲಿ ಬಾಣಂತಿ ಲಕ್ಷ್ಮಿಕಲಾ 40 ದಿನದ ಮಗುವಿನ ಜೊತೆ ಮಲಗಿದ್ದರು. ಈ ವೇಳೆ ಮಗುವಿನ ಮೂಗಿಗೆ ಇಲಿ ಕಚ್ಚಿದೆ. ಇದರಿಂದಾಗಿ ಮಗು ಮೂಗಿನಿಂದ ರಕ್ತ ಸುರಿದಿದೆ.

ತಕ್ಷಣವೇ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ. ಎಷ್ಟೊಂದು ಕಾಲಜಿ ವಹಿಸಿದ್ದರೂ ಇಂಥ ಅನಾಹುತ ನಡೆದಿದೆ. ಮನೆಯಲ್ಲಿ ಇಲಿಗಳ ಓಡಾಟ ಇದ್ದಾಗ ಮುಂಚೆಯೇ ಜಾಗರೂಕರಾಗಿರಬೇಕಿತ್ತು ಎಂದು ಮಗುವಿನ ಅಜ್ಜ ಕಣ್ಣೀರಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!