Sunday, June 26, 2022

Latest Posts

IPL 2022 | ಪಂಜಾಬ್‌ ವಿರುದ್ಧ ಟಾಸ್‌ ಗೆದ್ದ ಸನ್‌ ರೈಸರ್ಸ್‌ ಬೌಲಿಂಗ್‌ ಆಯ್ಕೆ: ಎರಡೂ ತಂಡಗಳ ಪ್ಲೇಯಿಂಗ್ XI ಹೀಗಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ಅಭಿಮಾನಿಗಳಿಗೆ ಇಂದು ಡಬಲ್‌ ದಮಾಕಾ. ಮಧ್ಯಾಹ್ಯ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗುತ್ತಿದೆ. ರಾತ್ರಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನೈ ಸೂಪರ್‌ ಕಿಂಗ್ಸ್‌ ಪ್ರಸ್ತುತ ಪಾಯಿಂಟ್ಸ್‌ ಟೇಬಲ್‌ ಟಾಪರ್ ತಂಡವಾದ‌ ಗುಜರಾತ್‌ ಟೈಟಾನ್ಸ್‌ ನೊಂದಿಗೆ ಸೆಣಸಾಡಲಿದೆ.
ಮುಂಬೈನ ಡಿವೈ ಪಾಟೀಲ್‌ ಸ್ಪೋರ್ಸ್‌ ಅಕಾಡೆಮಿಯಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಸನ್‌ ರೈಸರ್ಸ್‌ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಪಂಜಾಬ್‌ ತಂಡವು ಮೊದಲು ಬ್ಯಾಟಿಂಗ್‌ ನಡೆಸಲಿದೆ. ಎಸ್‌ಆರ್‌ಹೆಚ್ ನಾಯಕ ಕೇನ್‌ ವಿಲಿಯಮ್ ಸನ್‌‌ ಸತತ ಆರನೇ ಬಾರಿಗೆ ಟಾಸ್‌ ಗೆದ್ದಿರುವುದು ವಿಶೇಷ.
ಪಂಜಾಬ್‌ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಗಾಯದ ಕಾರಣದಿಂದ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಪ್ರಭುಸಿಮ್ರಾನ್‌ ಸಿಂಗ್‌ ಕಣಕ್ಕಿಳಿದಿದ್ದಾರೆ. ಹೈದರಾಬಾದ್‌ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ತಂಡಗಳು ಹೀಗಿವೆ…
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI):
ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ಸಿ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ಡಬ್ಲ್ಯೂ), ಶಶಾಂಕ್ ಸಿಂಗ್, ಜಗದೀಶ ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಶಿಖರ್ ಧವನ್(ಸಿ), ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ಡಬ್ಲ್ಯೂ), ಶಾರುಖ್ ಖಾನ್, ಓಡಿಯನ್ ಸ್ಮಿತ್, ಕಗಿಸೊ ರಬಾಡ, ರಾಹುಲ್ ಚಾಹರ್, ವೈಭವ್ ಅರೋರಾ, ಅರ್ಷದೀಪ್ ಸಿಂಗ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss