VIRAL VIDEO| ಮೊಟ್ಟೆ ಕದ್ದ ಮಹಿಳೆಯರಿಗೆ ಬುದ್ದಿ ಕಲಿಸಿದ ನವಿಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಮ್ಮನೆ ಪಕ್ಷಿಗಳು ಎಂದುಕೊಳ್ಳಬೇಡಿ…ಕೋಪ ಬಂದಾಗ ಅವು ಕೂಡ ಸೈನಿಕರಂತೆ ವರ್ತಿಸುತ್ತವೆ. ತನ್ನ ಗೂಡಿನಿಂದ ಮೊಟ್ಟೆಗಳನ್ನು ಕದ್ದ ಮಹಿಳೆಯರಿಗೆ ನವಿಲು ಹೇಗೆ ಬುದ್ದಿ ಕಲಿಸಿದೆ ನೀವೇ ನೋಡಿ.

ನವಿಲೊಂದು ಮರದ ಮೇಲೆ ಗೂಡಿನಲ್ಲಿ ಮೊಟ್ಟೆ ಇಟ್ಟಿದೆ. ಇಬ್ಬರು ಮಹಿಳೆಯರು ಮೊಟ್ಟೆಯ ಮೇಲೆ ಕಣ್ಣಿಟ್ಟು ಕದಿಯಲು ಯತ್ನಿಸಿದ್ದಾರೆ. ಒಬ್ಬಾಕೆ ಮರದ ಕೆಳಗೆ ನಿಂತಿದ್ದು, ಮೇಲಿಂದ ಮತ್ತೊಬ್ಬರು ಮೊಟ್ಟೆ ನೀಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಹಾರಿ ಬಂದ ನವಿಲು ಮರದ ಮೇಲೆ ಮಹಿಳೆಯ ಮೇಲೆ ದಾಳಿ ಮಾಡಿದೆ. ಕೆಳಗಿನಿಂದ ನೋಡುತ್ತಿದ್ದವಳನ್ನು ನವಿಲು ಬಿಡದೆ ಆಕೆಯ ಮೇಲೂ ಜಿಗಿದಿದೆ. ಆ ಹೆಂಗಸರ ಪರಿಸ್ಥಿತಿ ಹೇಗಿದೆ ಎಂದು ಊಹಿಸಿಕೊಳ್ಳಿ. ದಿ ಫಿಗೆನ್‌ನ ಟ್ವಿಟರ್ ಖಾತೆ @TheFigen ಮೂಲಕ ಹಂಚಿಕೊಂಡಿರುವ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ವಿಡಿಯೋ ನೋಡಿದ ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ. ನವಿಲು ತನ್ನ ಮೊಟ್ಟೆಗಳನ್ನು ರಕ್ಷಿಸಿದ ರೀತಿಯನ್ನು ಶ್ಲಾಘಿಸಿದರು. ನೀವು ಅಂತಹ ಘಟನೆಗಳನ್ನು ನೋಡಿ ಮೇಲೆ ಪಕ್ಷಿಗಳು ಮತ್ತು ಪ್ರಾಣಿಗಳ ಹತ್ತಿರ ಹೋಗದಂತೆ ಎಚ್ಚರಿಕೆ ವಹಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!