July 15, 2026
Wednesday, July 15, 2026
spot_img

ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದ್ದ ‘ಪೆದ್ದಿ’ OTTಯಲ್ಲಿ ಸೂಪರ್ ಹಿಟ್: ನೆಟ್‌ಫ್ಲಿಕ್ಸ್‌ನಲ್ಲಿ ನಂ.3 ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ ‘ಪೆದ್ದಿ’, ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲವಾಗಿತ್ತು. ಆದರೆ, ಒಟಿಟಿ ಅಂಗಳಕ್ಕೆ ಪ್ರವೇಶಿಸುತ್ತಿದ್ದಂತೆ ಈ ಸಿನಿಮಾ ಹೊಸ ಕಳೆ ಪಡೆದುಕೊಂಡಿದೆ. ಪ್ರಸ್ತುತ ಭಾರತದ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್ ಪಟ್ಟಿಯಲ್ಲಿ ಈ ಚಿತ್ರ ಭರ್ಜರಿಯಾಗಿ 3ನೇ ಸ್ಥಾನ ಅಲಂಕರಿಸಿದೆ. ಥಿಯೇಟರ್‌ನಲ್ಲಿ ಸಿನಿಮಾ ನೋಡದ ಸಿನಿಪ್ರಿಯರು ಈಗ ಒಟಿಟಿಯಲ್ಲಿ ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

ದಕ್ಷಿಣ ಭಾರತದ ಭಾಷೆಗಳಲ್ಲಿ ಸ್ಟ್ರೀಮಿಂಗ್

ಖ್ಯಾತ ನಿರ್ದೇಶಕ ಬುಚ್ಚಿ ಬಾಬು ಸನಾ ಆ್ಯಕ್ಷನ್ ಕಟ್ ಹೇಳಿರುವ ಈ ಸ್ಪೋರ್ಟ್ಸ್ ಆ್ಯಕ್ಷನ್ ಡ್ರಾಮಾ ಜುಲೈ 9ರಿಂದ ಒಟಿಟಿಯಲ್ಲಿ ಲಭ್ಯವಿದೆ. ಸದ್ಯಕ್ಕೆ ಹಿಂದಿ ಹೊರತುಪಡಿಸಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದ್ದು, ಅತ್ಯಧಿಕ ವೀಕ್ಷಣೆ ಪಡೆದುಕೊಳ್ಳುತ್ತಿದೆ.

ಭಾರಿ ಟ್ರೋಲ್‌ಗೆ ತುತ್ತಾದ ಕ್ರಿಕೆಟ್ ದೃಶ್ಯಗಳು

ಚಿತ್ರದಲ್ಲಿನ ಕ್ರೀಡಾ ದೃಶ್ಯಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಮೀಮ್ಸ್‌ಗಳು ಹರಿದಾಡುತ್ತಿವೆ. “ಇಂಗ್ಲೆಂಡ್‌ನಲ್ಲಿ ಜನಿಸಿದ ಕ್ರಿಕೆಟ್ ಆಟ, ತೆಲುಗು ಸಿನಿಮಾದಲ್ಲಿ ಅಂತ್ಯವಾಯಿತು” ಎಂಬ ಧಾಟಿಯಲ್ಲಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಆದಾಗ್ಯೂ, ನೆಗೆಟಿವ್ ಕಮೆಂಟ್‌ಗಳ ನಡುವೆಯೂ ರಾಮ್ ಚರಣ್ ಅವರ ನಟನೆ ಮತ್ತು ಸಿನಿಮಾದ ಮೇಲಿರುವ ಕುತೂಹಲದಿಂದಾಗಿ ‘ಪೆದ್ದಿ’ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !