ಈ ಪೆಂಗ್ವಿನ್‌ಗಳಿಗೆ ದುಬಾರಿ ಬೆಲೆಯ ಮೀನುಗಳೇ ಬೇಕಂತೆ.! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದ ಹಲವು ದೇಶಗಳು ಆರ್ಥಿಕ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿವೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ, ಆಹಾರ ಪದಾರ್ಥಗಳ ಬೆಲೆ ವಿಪರೀತವಾಗಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಜಪಾನ್‌ ಮೇಲೂ ಬೀರಿದ್ದು, ಆಹಾರ ಬೆಲೆ ಏರಿಕೆಯಾಗಿದೆ. ಹಾಗಾಗಿ ಜಪಾನ್‌ನಲ್ಲಿನ ಮೃಗಾಲಯ ಮತ್ತು ಅಕ್ವೇರಿಯಂ ವ್ಯವಸ್ಥಾಪಕರು ವೆಚ್ಚವನ್ನು ಕಡಿಮೆ ಮಾಡಲು ಮೆನುವಿನಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ.

ಅಲ್ಲಿರುವ ಪೆಂಗ್ವಿನ್ಸ್ ಮತ್ತು ನೀರುನಾಯಿಗಳಿಗೆ ಅಗ್ಗದ ಮೀನುಗಳನ್ನು ಆಹಾರವಾಗಿ ನೀಡಲು ಮುಂದಾಗಿದ್ದಾರೆ. ಆದರೆ, ಪೆಂಗ್ವಿನ್‌ಗಳು ಮತ್ತು ನೀರುನಾಯಿಗಳು ಕಡಿಮೆ ಬೆಲೆಯ ಮೀನನ್ನು ಸೇವನೆ ಮಾಡಲು ಒಪ್ಪುತ್ತಿಲ್ಲ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಅಕ್ವೇರಿಯಂ ಮ್ಯಾನೇಜರ್‌ಗಳು ಜಪಾನಿನ ಹಾರ್ಸ್ ಮ್ಯಾಕೆರೆಲ್‌ ಎಂಬ ದುಬಾರಿ ಮೀನುಗಳನ್ನು ನೀಡುತ್ತಿದ್ದರಂತೆ, ಜಪಾನ್‌ನಲ್ಲಿ ಆರ್ಥಿಕ ಹಿಂಜರಿತದಿಂದಾಗಿ, ಈ ಮೀನುಗಳ ಬೆಲೆ ತೀವ್ರವಾಗಿ ಹೆಚ್ಚಾಗಿದೆ.

ಇದರಿಂದ ಇವುಗಳ ವೆಚ್ಚ ಭರಿಸಲಾಗದ ವ್ಯವಸ್ಥಾಪಕರು ಕಡಿಮೆ ಬೆಲೆಗೆ ಸಿಗುವ ಸಾಬಾ ಎಂಬ ಇನ್ನೊಂದು ಬಗೆಯ ಮೀನುಗಳನ್ನು ಆಹಾರವಾಗಿ ನೀಡುತ್ತಿದ್ದಾರೆ. ಈ ಮೀನನ್ನು ತಿನ್ನದ ಕಾರಣ ಆಡಳಿತಾಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!