ಪತ್ನಿ, ಮಗನನ್ನು ಕೊಚ್ಚಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಹೊಸದಿಗಂತ ವರದಿ, ಕುಮಟಾ:
ಕೌಟುಂಬಿಕ ಜಗಳ ತಾರಕಕ್ಕೇರಿ ವ್ಯಕ್ತಿಯೋರ್ವ ತನ್ನ ಪತ್ನಿ ಮತ್ತು ಮಗನನ್ನು ಕತ್ತಿಯಿಂದ ಕಡಿದು ಸಾಯಿಸಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಂಗಣಿ ಗ್ರಾಮದಲ್ಲಿ ಸಂಭವಿಸಿದೆ.
ರಾಮಾ ಮಾಯಾ ಮರಾಠಿ (40) ತನ್ನ ಹೆಂಡತಿ ಮತ್ತು ಮಗನನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು ಆತನ ಪತ್ನಿ ತಾಕಿ ಮರಾಠಿ (35) ಮತ್ತು ಮಗ 6 ನೇ ತರಗತಿ ವಿದ್ಯಾರ್ಥಿ ಲಕ್ಷ್ಮಣ ಮರಾಠಿ (12) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಹಿರಿಯ ಮಗ ಭಾಸ್ಕರ ಮರಾಠಿ(15) ತಂದೆಯ ಹೊಡೆತದಿಂದ ತಪ್ಪಿಸಿಕೊಂಡು ಪಾರಾಗಿದ್ದಾನೆ.
ಗಂಡ ಹೆಂಡತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು ಕೋಪದಲ್ಲಿ ಹೆಂಡತಿ ಮತ್ತು ಮಗನನ್ನು ಕೊಂದು ತಾನೂ ನೇಣಿಗೆ ಶರಣಾದ ವ್ಯಕ್ತಿಯ ಕೃತ್ಯದಿಂದ ಸುತ್ತ ಮುತ್ತಲಿನ ಜನರು ತಲ್ಲಣಗೊಂಡಿದ್ದಾರೆ.
ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!