April 27, 2026
Monday, April 27, 2026
spot_img

ಹಾಸನ ನಗರಪಾಲಿಕೆ ಎಇಇ ಮನೆ ಮೇಲೆ ಲೋಕಾ ದಾಳಿ : ಬಾಗಿಲು ತೆಗೆಯದೇ ಕಳ್ಳಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಹಾಸನದ ಹಾಸನ ನಗರದ ರಕ್ಷಣಾಪುರಂನಲ್ಲಿರುವ ಹಾಸನ ಮಹಾನಗರಪಾಲಿಕೆ ಎಇಇ ಎಂ.ಸಿ ಸತ್ಯನಾರಾಯಣ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೆಳಗಿನ ಜಾವ ಸತ್ಯನಾರಾಯಣ ಅಧಿಕಾರಿಗಳು ಬಂದ ಸದ್ದು ಕೇಳಿ ಮನೆಯ ಎಲ್ಲ ಲೈಟ್‌ಗಳನ್ನು ಆಫ್‌ ಮಾಡಿದ್ದಾರೆ. ಸತತ ಎರಡು ಗಂಟೆವರೆಗೂ ಮನೆಯ ಬೆಲ್‌ ಬಾರಿಸಿದರೂ ಬಂದು ಬಾಗಿಲು ತಗೆದಿಲ್ಲ.

ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಸತ್ಯನಾರಾಯಣ ಬಾಗಿಲು ತೆರೆಯುತ್ತಿಲ್ಲ. ಮನೆಯ ಸುತ್ತಲೂ ಓಡಾಡಿ ಬಾಗಿಲು ತೆರಸಲು ಪ್ರಯತ್ನಿಸುತ್ತಿದ್ದು ಸತತ 2 ಗಂಟೆಗೂ ಹೆಚ್ಚು ಕಾಲದಿಂದ ಮನೆಯ ಬಳಿಯೇ ಬೀಡುಬಿಟ್ಟಿದ್ದಾರೆ‌. ಸತ್ಯನಾರಾಯಣ ಫೋನ್ ಕೂಡ ಸ್ವಿಚ್‌ ಆಫ್‌ ಮಾಡಿದ್ದಾರೆ.

ಇನ್ನೂ ಸತ್ಯನಾರಾಯಣ ಬಾಗಿಲು ತೆರೆಯದೇ ಸತಾಯಿಸುತ್ತಿರುವ ಕಾರಣ ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ನಂದಿನಿ ಕೂಟ ಭೇಟಿ ನೀಡಿ ಪರಿಸ್ಥಿತಿ ಮೇಲ್ವಿಚಾರಣೆ ನಡೆಸಿದ್ದಾರೆ. ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಅಲ್ಲಿಂದ ತೆರಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !