August 7, 2026
Friday, August 7, 2026
spot_img

ಆಗಸ್ಟ್‌ನಲ್ಲಿ ಹುಟ್ಟಿದವರು ಎಲ್ಲಿ ಹೋದ್ರೂ ತಮ್ಮ ಲಕ್‌ ಜೊತೆಯಲ್ಲೇ ತೆಗೆದುಕೊಂಡು ಹೋಗ್ತಾರಂತೆ! ಇನ್ಯಾವ ಸ್ಪೆಷಲ್‌ ಗುಣಗಳಿವೆ?

ಆಗಸ್ಟ್‌ ತಿಂಗಳಿನಲ್ಲಿ ಹುಟ್ಟಿದವರು ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಕ್ಕೆ ಹೆಸರುವಾಸಿಯಾದವರು. ಸಿಂಹ ಅಥವಾ ಕನ್ಯಾ ರಾಶಿಗೆ ಸೇರಿದ ಈ ಜನರು ಕೆಲಸದಲ್ಲಿ ಪರಿಪೂರ್ಣತೆ ಬಯಸುತ್ತಾರೆ. ಯಾವ ಕೆಲಸ ಬಂದರೂ ಎಲೆಮರೆಕಾಯಿಯಂತೆ ಹಿಂದೆ ನಿಲ್ಲದೇ ಮುಂದೆ ಬಂದು ಕೈ ಎತ್ತಿ ನಾನು ಮಾಡುತ್ತೇನೆ ಎನ್ನುತ್ತಾರೆ. ಮಕ್ಕಳಿಂದಲೇ ಇವರಲ್ಲಿ ನಾಯಕತ್ವದ ಗುಣವನ್ನು ಕಾಣಬಹುದು.

ಆಗಸ್ಟ್‌ ತಿಂಗಳಿನಲ್ಲಿ ಹುಟ್ಟಿದವರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ..

ಈ ತಿಂಗಳಿನಲ್ಲಿ ಹುಟ್ಟಿದ ಜನರು ಸ್ನೇಹಜೀವಿಗಳು. ಇವರನ್ನು ನೋಡಿದ ತಕ್ಷಣವೇ ಹಳೆಯ ಸ್ನೇಹಿತರೇನೋ ಎನ್ನುವಂತ ಭಾಸವಾಗುತ್ತದೆ. ಇವರಿಗೆ ಭಯವೆನ್ನುವುದೇ ಇಲ್ಲ. ಎಂತಹ ಸಂದರ್ಭ ಬಂದರೂ ಎದುರಿಸುವ ತಾಕತ್ತು ಇದೆ.

ಈ ತಿಂಗಳಿನಲ್ಲಿ ಹುಟ್ಟಿದವರು ಸ್ಪುರಧ್ರೂಪಿಗಳು. ನೋಡೋಕೆ ಅಂದವಾಗಿದ್ದರೂ ಜನ ಅವರ ಮಾತುಕತೆ, ಹಾವಭಾವದಿಂದ ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮ ಕಣ್ಣನ್ನು ಒಂದು ಕಡೆ ನೆಟ್ಟರೆ ಅದನ್ನು ಪಡೆಯದೇ ಹಿಂದಕ್ಕೆ ನೋಡುವವರಲ್ಲ.

ಇವರಿಗೆ ಅಟೆಂಷನ್‌ ಕೊರತೆ ಇಲ್ಲ. ಎಲ್ಲಿ ಹೋದರೂ ಜನ ಇಷ್ಟಪಡುತ್ತಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಇವರು ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಿಬಿಡುತ್ತಾರೆ. ಇತರರನ್ನು ಹೊಗಳಿ ಖುಷಿಪಡುತ್ತಾರೆ. ಹಾಗೇ ಹೊಗಳಿಕೆ ಪಡೆಯುತ್ತಾರೆ.

ಪ್ರೀತಿಯ ವಿಚಾರಕ್ಕೆ ಬಂದರೆ ಇವರು ಎಕ್ಸ್ಟ್ರೀಮ್‌ ಜನ. ಪ್ರೀತಿಯೂ ಅತಿ, ಸಿಟ್ಟೂ ಅತಿ ಹಾಗೇ ದ್ವೇಷವೂ ಅತಿಯಾಗಿರುತ್ತದೆ. ಆದಷ್ಟು ಜನರಲ್ಲಿ ಒಳಿತನ್ನು ಕಾಣುವ ಇವರು, ಕೆಲವೊಮ್ಮೆ ಕಾರಣವೇ ಇಲ್ಲದೇ ಜನರಿಂದ ದೂರ ಇರುತ್ತಾರೆ.

ಕೆಲಸದ ವಿಚಾರದಲ್ಲಿ ತಾನು ಪರ್ಫೆಕ್ಟ್‌ ಎಂದು ಗೊತ್ತಿದ್ದರೂ ಅಹಂ ತೋರಿಸುವ ಜನ ಇವರಲ್ಲ. ಇಬ್ಬರ ಮಧ್ಯದ ಜಗಳ ಬಿಡಿಸೋಕೆ ಸಧಾ ಸಿದ್ಧ. ಇತರರಿಗೆ ಅದ್ಭುತ ಅಡ್ವೈಸ್‌ ನೀಡುತ್ತಾರೆ.

ಓವರ್‌ ಥಿಂಕ್‌ ಮಾಡೋದ್ರಲ್ಲಿ ಇವರು ನಿಸ್ಸೀಮರು. ಇಲ್ಲದ ಸಲ್ಲದ ವಿಷಯಗಳನ್ನು ಇಮ್ಯಾಜಿನ್‌ ಮಾಡಿಕೊಂಡೇ ಕೊರಗುತ್ತಾರೆ. ಧೈರ್ಯ ಇವರ ಜೊತೆಯಲ್ಲೇ ಇದ್ದರೂ ಸಂದರ್ಭಬರುವರೆಗೂ ಸುಮ್ಮನಿರೋಕೆ ಇಷ್ಟಪಡುತ್ತಾರೆ.

ನಿಮ್ಮ ಸುತ್ತಮುತ್ತಲೂ ಯಾರಾದರೂ ಆಗಸ್ಟ್‌ನಲ್ಲಿ ಹುಟ್ಟಿದ ಜನರು ಇದ್ದರೆ ಅವರ ಸಾಥ್‌ ಬಿಡಬೇಡಿ. ಅವರು ತಮ್ಮ ಲಕ್‌ನ್ನು ಎಲ್ಲಿ ಹೋದರೂ ತರುತ್ತಾರೆ. ಇತರರಿಗೂ ಹರಡುತ್ತಾರೆ. ಈ ಸುದ್ದಿಯನ್ನು ನಿಮ್ಮ ಆಗಸ್ಟ್‌ ಬಾರ್ನ್‌ಗಳಿಗೆ ಶೇರ್‌ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !