ಹೊಸದಿಗಂತ ವರದಿ,ಹಾವೇರಿ:
ಕರ್ನಾಟಕ ಕಾಂಗ್ರೆಸ್ ತುಷ್ಟೀಕರಣ ನೀತಿ, ಸುಳ್ಳು ಭರವಸೆಗಳ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು, ಅಭಿವೃದ್ಧಿ ಮಾಡುವುದಕ್ಕೆ ಅವಕಾಶವಿದ್ದರೂ ಮಾಡದಿರುವುದು. ಕಾಂಗ್ರೆಸ್ ಶೇ.೮೫ ಕಮಿಷನ್ ಪಡೆಯುವ ಪಕ್ಷ ಇಂತಹ ಪಕ್ಷ ಜನತೆಗೆ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಾವೇರಿಯಲ್ಲಿ ಅಖಂಡ ಧಾರವಾಡ ಜಿಲ್ಲೆಯ ಬಿಜೆಪಿ ೧೩ ಜನ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿ ಮಾತನಾಡಿದ ಅವರು. ಕರ್ನಾಟಕ ಕಾಂಗ್ರೆಸ್ ತುಷ್ಟೀಕರಣ ನೀತಿಯನ್ನು ಕರ್ನಾಟಕದ ಪ್ರತಿಯೊಬ್ಬ ಜನತೆಯೂ ಅರ್ಥಮಾಡಿಕೊಂಡಿದ್ದಾರೆ. ಒಬಿಸಿ, ಲಿಂಗಾಯತ ಸಮುದಾಯ ಎಲ್ಲರೂ ಕಾಂಗ್ರೆಸ್ನ ನೀತಿಯಿಂದ ನರಾಜ್ ಮತ್ತು ಕೋಪದಲ್ಲಿದ್ದಾರೆ. ಜನರ ಸಿಟ್ಟು ಈಗ ಕರ್ನಾಟಕದ ಗಲ್ಲಿ ಗಲ್ಲಿ, ಮನೆ ಮನೆಗಳ್ಳದೆ ನಾಲ್ಕು ದಿಕ್ಕುಗಳಿಂದ ಈ ಬಾರಿಯ ಬಹುಮತದ ಬಿಜೆಪಿ ಸರ್ಕಾರ ತರುವುದೆಂಬ ಒಂದೇ ಧ್ವನಿಯಿಂದ ನಿರ್ಧಾರ ಮತ್ತು ಸಂಕಲ್ಪ ಮಾಡಿದ್ದಾರೆ. ಕಾಂಗ್ರೆಸ್ನ ಎಲ್ಲ ಸುಳ್ಳುಗಳು ಬಿಜೆಪಿಯ ಅಲೆಯಲ್ಲಿ ಹೋಗಿವೆ ಎಂದು ಹೇಳಿದರು.
ಕಾಂಗ್ರೆಸ್ ೫೦ ವರ್ಷ ಹಿಂದೆ ದೇಶದ ಜನರ ಗರೀಬಿ ಹಠಾವೋ ಗ್ಯಾರಂಟಿ ನೀಡಿತ್ತು. ಇದರ ಮೇಲೆನೇ ೫೦ ವರ್ಷ ರಾಜಕಾರಣ ಮಾಡುತ್ತ ಬಂದಿತು ಆದರೆ ಜನರೆ ಬಡತನ ಮಾತ್ರ ಹೋಗಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ನಂತರದಲ್ಲಿ ಜನತೆಯ ಬಡತನ ನಿರ್ಮೂಲನೆಗೆ ಆದ್ಯತೆ ನೀಡಿದೆ ಎಂದರು.
ರೈತರ ಹೊಲಗಳಿಗೆ ನೀಡುವ ಯೂರಿಯಾ ಗೊಬ್ಬರದಲ್ಲಿಯೂ ಕಾಂಗ್ರೆಸ್ ಹಣವನ್ನು ಲೂಟಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿತ್ತು. ಆದರೆ ಪ್ರಸಕ್ತ ವಿಶ್ವ ಮಾರುಕಟ್ಟೆಯಲ್ಲಿ ಪ್ರತಿ ಕೇಜಿಯ ಯೂರಿಯಾದ ಬೆಲೆ ೫೦ ರೂ ಇದೆ ಆದರೆ ಬಿಜೆಪಿ ಸರ್ಕಾರ ಪ್ರತಿ ಕೇಜಿಗೆ ೫ ರೂನಂತೆ ನೀಡುವ ಮೂಲಕ ರೈತರ ನೆರವಿಗೆ ಬಂದಿದೆ ಎಂದು ತಿಳಿಸಿದರು.
ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಅದರ ಹಣವನ್ನು ಕಾಂಗ್ರೆಸ್ ಶೇ.೮೫ ಕಮಿಷನ್ ಪಡೆಯುವ ಮೂಲಕ ಲೂಟಿ ಮಾಡಿತು. ಆದರೆ, ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕಾರ್ಯಗಳಿಗೆ ವೇಗ ದೊರೆಯಿತು. ಅಭಿವೃದ್ಧಿ ಪರ ಇರುವ ಬಿಜೆಪಿ ಸರ್ಕಾರಕ್ಕೆ ಮತ ನೀಡಿ ನಿಚ್ಛಳ ಬಹುಮತದಿಂದ ಆಯ್ಕೆ ಮಾಡುವ ಮೂಲಕ ಅಧಿಕಾರಕ್ಕೆ ತನ್ನಿರಿ ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು.
ಬಡತನ, ಜಾತಿ, ಪಂಥ ನೋಡಲ್ಲ. ಬಡವರ ಕಲ್ಯಾಣಕ್ಕೆ ನಾವು ಆದ್ಯತೆ ನೀಡಿದ್ದೇವೆ. ಬಡವರು ಹಸಿವಿನಿಂದ ಮಲಗಬಾರದೆಂದು ಉಚಿತ ರೇಷನ್ ಕೊಡುತ್ತದ್ದೇವೆ, ಬಡವರ ಆರೋಗ್ಯಕ್ಕೆ ಆಯುಷ್ಮಾನ್ ಯೋಜನೆ ಕೊಡುತ್ತಿದ್ದೇವೆ. ಬಡವರ ಮನೆಯ ಗ್ಯಾಸ್ ಕಲೆಕ್ಷನ್ ಆಗಿದೆ, ಉಜಾಲಾ ಯೋಜನೆಯಡಿ ಬಲ್ಬ್ ಉರಿಯಲಿದೆ. ಬಡವರ ಮನೆಗೆ ನಳದ ನೀರು ಬರುತ್ತಿದೆ ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಹೇಳಿದರು.
ಮುಖ್ಯಮಂತ್ರಿ ಸಬವರಾಜ ಬೊಮ್ಮಾಯಿ ಮಾತನಾಡಿದರು. ಅಖಂಡ ಧಾರವಾಡ ಜಿಲ್ಲೆಯ ೧೩ ಕ್ಷೇತ್ರಗಳ ಅಭ್ಯರ್ಥಿಗಳು ಹಾಗೂ ಸಂಸದ ಶಿವಕುಮಾರ ಉದಾಸಿ ವೇದಿಕೆಯಲ್ಲಿದ್ದರು.