ಶಿವಮೊಗ್ಗಕ್ಕೆ ಪ್ರಧಾನಿ ಮೋದಿ: ವಾಹನ ಸಂಚಾರದಲ್ಲಿ ಬದಲಾವಣೆ

ಹೊಸದಿಗಂತ ವರದಿ,ಶಿವಮೊಗ್ಗ:

ಪ್ರಧಾನಿ ನರೇಂದ್ರ ಮೋದಿ, ಅವರು ಜಿಲ್ಲೆಯ ಆಯನೂರಿಗೆ ಮೇ 07 ರ ನಾಳೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಸುಗಮ ಸಂಚಾರದ ಹಿತ ದೃಷ್ಟಿಯಿಂದ ಜಿಲ್ಲಾಡಳಿತ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಮಾರ್ಗ ಬದಲಾವಣೆ ಹೀಗಿದೆ.‌

1) ಸಾಗರದಿಂದ ಶಿವಮೊಗ್ಗ ಕಡೆಗೆ ಬರುವ ಲಘು ವಾಹನಗಳು:
ಆನಂದಪುರ ಎಡೆಹಳ್ಳಿ ಸರ್ಕಲ್ – ಚೊರಡಿ – ಕುಂಸಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಎಡಕ್ಕೆ ತಿರುಗಿ ಹಾರ್ನಳ್ಳಿ – ಬೈರನಕೊಪ್ಪ -ಹಿಟ್ಟೂರು ಕ್ರಾಸ್ ಬಲಕ್ಕೆ ತಿರುಗಿ ಶಿವಮೊಗ್ಗಕ್ಕೆ ಬಂದು ಸೇರುವುದು.

2) ಸಾಗರದಿಂದ ಶಿವಮೊಗ್ಗದ ಕಡೆಗೆ ಬರುವ ಭಾರಿ ಮತ್ತು ಸರಕು ವಾಹನಗಳು:-
ಆನಂಪುರ – ಶಿಕಾರಿಪುರ – ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.

3) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಲಘು ವಾಹನಗಳು:-
ಶಿವಮೊಗ್ಗದಿಂದ ಸೋಮಿನಕೊಪ್ಪ – ಗೆಜ್ಜೇನಹಳ್ಳಿ – ಮುದುವಾಲ – ಹಾರ್ನಳ್ಳಿ – ಕುಂಸಿ ರೈಲ್ವೆ ಗೇಟಿನ ಹತ್ತಿರ ಬಲಕ್ಕೆ ತಿರುಗಿ ಸಾಗರಕ್ಕೆ ಹೋಗುವುದು.

4) ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ಭಾರಿ ಮತ್ತು ಸರಕು ವಾಹನಗಳು:-
ಶಿವಮೊಗ್ಗದಿಂದ ಹೊನ್ನಾಳಿ – ಶಿಕಾರಿಪುರ – ಆನಂದಪುರ ಮೂಲಕ ಸಾಗರಕ್ಕೆ ಹೋಗುವುದು

5) ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುವ ಭಾರಿ ಮತ್ತು ಲಘು ವಾಹನಗಳು:-
ಶಿವಮೊಗ್ಗದಿಂದ ಹೊನ್ನಾಳಿ ಮೂಲಕ ಶಿಕಾರಿಪುರಕ್ಕೆ ಹೋಗುವುದು.

6) ಶಿಕಾರಿಪುರ ದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:-
ಶಿಕಾರಿಪುರ ದಿಂದ ಹೊನ್ನಾಳಿ ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.

7) ಶಿವಮೊಗ್ಗದಿಂದ ರಿಪ್ಪನ್ ಪೇಟೆ ಹಾಗೂ ಹೊಸನಗರ ಕಡೆಗೆ ಹೋಗುವ ಭಾರಿ ಮತ್ತು ಲಘು ವಾಹನಗಳು:-
ಶಿವಮೊಗ್ಗದಿಂದ ಮಂಡಗದ್ದೆ – ಕೋಣಂದೂರು – ರಿಪ್ಪನಪೇಟೆ ಮೂಲಕ ಹೊಸನಗರಕ್ಕೆ ಹೋಗುವುದು.

8) ರಿಪ್ಪನಪೇಟೆ ಹೊಸನಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ಮತ್ತು ಲಘು ವಾಹನಗಳು:-
ಕೋಣಂದೂರು – ಸಿ. ಕೆ. ರಸ್ತೆ – ಮಂಡಗದ್ದೆ – ಮಾಳೂರು ಮೂಲಕ ಶಿವಮೊಗ್ಗಕ್ಕೆ ಬಂದು ಸೇರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!