ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ? ಎಂದು ಪ್ರಶ್ನಿಸಿದ ರಾಜ್ಯ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಒಂದು ರಾಜ್ಯದಲ್ಲಿಯೂ ಉತ್ತಮ ಸ್ಥಾನ ಗಳಿಸದೆ ಧೂಳಿಪಟವಾಗಿರುವ ಕಾಂಗ್ರೆಸ್‌ ಗೆ ರಾಜ್ಯ ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ಕರ್ನಾಟಕ, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ವಿಸರ್ಜಿಸಿ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಆದರೆ ನಕಲಿ ಗಾಂಧಿಗಳು, ನಕಲಿ ಕಾಂಗ್ರೆಸ್ಸಿಗರು ಗಾಂಧೀಜಿ ಮಾತಿಗೆ ಬೆಲೆ ಕೊಡಲಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂಬಂತೆ ಈಗ ಜನರೇ‌ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿದ್ದಾರೆ. ಇನ್ನಾದರೂ ನಕಲಿ ಗಾಂಧಿ ಕುಟುಂಬ ಪೂಜಕರು ಬುದ್ದಿ ಕಲಿಯಬಹುದೇ? ಎಂದು ಪ್ರಶ್ನಿಸಿದೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಒಂದಷ್ಟು ಜನ ಸೋನಿಯಾ ಹಾಗೂ ಪ್ರಿಯಾಂಕಾ ಗಾಂಧಿ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೈತಿಕ ಹೊಣೆ ಎಂಬ ಶಬ್ದಕ್ಕೆ ಅರ್ಥವಿದೆಯೇ? ಅವರವರೇ, ಅವರ ಕುಟುಂಬದೊಳಗೆ ಜವಾಬ್ದಾರಿ ಹಂಚಿಕೊಳ್ಳುವ ವಾಸ್ತವತೆಯಲ್ಲಿ ನಕಲಿ ಗಾಂಧಿಗಳು ರಾಜೀನಾಮೆ ನೀಡುವುದು ಹೇಗೆ ಸಾಧ್ಯ? ಎಂದು ವ್ಯಂಗ್ಯವಾಡಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!