Monday, September 25, 2023

Latest Posts

ಭಾರತದ ಜನರು ಹೊಸ ಬಟ್ಟೆ ತಗೋತಿದ್ದಾರೆ, ಆದ್ರೆ ಇನ್ನರ್‌ವೇರ‍್ಸ್ ಅಲ್ಲ! ಒಳಉಡುಪು ಕಂಪನಿಗಳ ಮಾರಾಟ ಕುಸಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಜನರು ಹೊಸ ಬಟ್ಟೆ ಖರೀದಿಗೆ ಮುಂದಾಗಿದ್ದಾರೆ. ಮನೆಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಇನ್ನರ್‌ವೇರ‍್ಸ್ ಮಾತ್ರ ಖರೀದಿ ಮಾಡ್ತಿಲ್ಲ!

ಹೌದು, ವರದಿಯೊಂದರ ಪ್ರಕಾರ ಭಾರತದಲ್ಲಿ ಒಳಉಡುಪುಗಳ ಖರೀದಿ ಕುಸಿತವಾಗಿದ್ದು, ಕಂಪನಿಗಳು ಲಾಸ್‌ನಲ್ಲಿವೆ. ಪಾರ್ಟಿವೇರ್, ಆಫೀಸ್‌ವೇರ್, ಫೆಸ್ಟೀವ್ ವೇರ್, ಎತ್ನಿಕ್ ವೇರ್ ಖರೀದಿಗೆ ಮುಂದಾದ ಜನ ಹೊಸ ಒಳಉಡುಪುಗಳನ್ನು ಮಾತ್ರ ಖರೀದಿ ಮಾಡ್ತಿಲ್ಲ.

ಹೆಸರಾಂತ ಕಂಪನಿಗಳಾದ ಜಾಕಿ, ರೂಪಾ, ಫ್ರಂಟ್‌ಲೈನ್, ಡಾಲರ್ ಇತರ ಕಂಪನಿಗಳ ಮಾರಾಟ ಕುಸಿದಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಜನರು ಖರ್ಚು ಮಾಡೋಕೆ ಮುಂದಾಗುತ್ತಿಲ್ಲ. ಜೊತೆಗೆ ಅಂಗಡಿಗಳಿಂತ ಆನ್‌ಲೈನ್‌ನಲ್ಲಿ ಉಡುಪುಗಳು ಕಡಿಮೆ ಬೆಲೆಗೆ ಸಿಗುತ್ತಿರುವ ಕಾರಣ ದುಬಾರಿ ಬ್ರ್ಯಾಂಡ್‌ಗಳನ್ನು ಜನ ಆರಿಸುತ್ತಿಲ್ಲ. ಆನ್‌ಲೈನ್ ಸ್ಟೋರ್‌ಗಳಲ್ಲಿ ಹೆಚ್ಚಿನ ಲಾಭ ಇರುವ ಕಾರಣ ಅಂಗಡಿಗಳ ಕಡೆ ಜನ ಮುಖ ಮಾಡುತ್ತಿಲ್ಲ.

ಯುರೋಮಾನಿಟರ್ ಇಂಟರ್‌ನ್ಯಾಷನಲ್ ವರದಿ ಪ್ರಕಾರ ಭಾರತದಲ್ಲಿ ಒಳಉಡುಪುಗಳ ಮಾರುಕಟ್ಟೆಯು ೪೮, ೧೨೩ ಕೋಟಿ ರೂಪಾಯಿ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!