Monday, August 15, 2022

Latest Posts

ಕಣ್ಣೆದುರೇ ಕೊಚ್ಚಿಹೋದ ವಾಹನ, ವಿಡಿಯೋ ತೆಗೆಯುತ್ತಾ ನಿಂತಿದ್ದರು ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದ ಸ್ಕಾರ್ಪಿಯೋ ವಾಹನದಲ್ಲಿದ್ದ ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋದ ಅಘಾತಕಾರಿ ಘಟನೆ ನಾಗ್ಪುರ ಜಿಲ್ಲೆಯ ಕೆಲ್ವಾಡ್ ನ ನಂದಗೌಮುಖ-ಛತ್ರಪುರ ರಸ್ತೆಯ ಬ್ರಹ್ಮನ್ಮರಿ ನುಲ್ಲಾದಲ್ಲಿ ನಡೆದಿದೆ.
ರೇಲಿಂಗ್ಸ್ ಇಲ್ಲದ ಸೇತುವೆಯನ್ನು ದಾಟಲೆತ್ನಿಸಿದ ವೇಳೆ ನೀರಿನ ರಭಸಕ್ಕೆ ವಾಹನ ಕೊಚ್ಚಿಹೋಗಿದ್ದು, ಇದರಲ್ಲಿ ಎಂಟು ಜನ ಪ್ರಯಾಣಿಸುತ್ತಿದ್ದರು.
ಇಬ್ಬರು ಸುರಕ್ಷಿತವಾಗಿ ಈಜಿ ಪಾರಾಗಿದ್ದರೆ, 13 ವರ್ಷದ ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಪಘಾತಕ್ಕೀಡಾದ ವಾಹನದಲ್ಲಿದ್ದ ಪ್ರಯಾಣಿಕರನ್ನು ರೋಶ್ನಿ ಚೌಕಿಕರ್ (35), ಅವರ ಪುತ್ರ ದಾದು (13), ನೀಮು ಅತ್ನೆರೆ (45), ಮಧುಕರ್ ಪಾಟೀಲ್ (60) ಮತ್ತು ಅವರ ಪತ್ನಿ ನಿರ್ಮಲಾ (55) ಎಂದು ಗುರುತಿಸಲಾಗಿದೆ. ವಾಹನದ ಚಾಲಕ ವಿಕಾಸ್ ದಿವ್ಟೆ (35) ನಾಪತ್ತೆಯಾಗಿದ್ದಾರೆ. ಈ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದ್ದು, ಜಲಾವೃತ ಕಾರಿನ ಕಿಟಕಿಯಿಂದ ಕೈ ಹೊರಹಾಕಿ ಕಾರಿನ ಮೇಲ್ಭಾಗವನ್ನು ಹಿಡಿದಿರುವುದು, ರಕ್ಷಣೆ ಮರೆತು ನೂರಾರು ಮಂದಿ ನದಿದಂಡೆಯಲ್ಲಿ ನಿಂತು ಈ ದೃಶ್ಯವನ್ನು ನೋಡುತ್ತಿರುವುದು ದೃಶ್ಯದಲ್ಲಿದೆ.

ಮೂಲಗಳ‌ ಮಾಹಿತಿ ಪ್ರಕಾರ ವಾಹನದಲ್ಲಿದ್ದ ಪ್ರಯಾಣಿಕರು ಮಧ್ಯಪ್ರದೇಶದ ಮುಲ್ತಾಯಿಯವರಾಗಿದ್ದು, ವಿವಾಹ ಸಮಾರಂಭಕ್ಕಾಗಿ ನಾಗ್ಪುರಕ್ಕೆ ಆಗಮಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss