ನಾವು ಮನುಷ್ಯರನ್ನು ಪ್ರೀತಿಸುವ ಜನ: ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ತೀರ್ಮಾನ ಮಾಡಿದ್ದೇನೆ. ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತಾರೆ ಅದರಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಭಾನುವಾರ ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೋಲಾರದಲ್ಲಿ ನಾನು ಮನೆ ಹುಡುಕುತ್ತಿಲ್ಲ ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ, ಮನೆ ಹುಡುಕುವ ಬಗ್ಗೆ ನನಗೆ ಗೊತ್ತೇ ಇಲ್ಲ ನಮ್ಮ ಪಕ್ಷದವರು ಹುಡುಕುತ್ತಿದ್ದಾರೆ ಮನೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಕರಾವಳಿಯನ್ನು ಬಿಜೆಪಿಗರು ಹಿಂದುತ್ವದ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ. ಸುಳ್ಳು ಹೇಳುವುದೇ ಬಿಜೆಪಿಯವರ ಕಸುಬಾಗಿದೆ. ಸಾವರ್ಕರ್, ಹಿಟ್ಲರ್ ತತ್ವದಿಂದ ಪ್ರಭಾವಿತರಾದವರು. ಹಿಂದುತ್ವ ಶಬ್ದ ಹುಟ್ಟು ಹಾಕಿದವರೇ ಸಾವರ್ಕರ್. ಹಿಂದೂ ಬೇರೆ, ಹಿಂದುತ್ವ ಬೇರೆ. ಭಯೋತ್ಪಾದನೆ ಯಾರು ಮಾಡಿದರು ತಪ್ಪು, ನಾವು ಯಾವತ್ತೂ ಖಂಡಿಸುತ್ತೇವೆ. ಭಯೋತ್ಪಾದಕರಿಗೆ ಕಠಿಣವಾದ ಶಿಕ್ಷೆಯಾಗಬೇಕು. ನಮಗೆ ಹಿಂದುತ್ವದ ಹೆಸರಲ್ಲಿ ಸುಳ್ಳು ಹೇಳುವವರು ಮನುವಾದ ಮಾಡುವವರನ್ನು ಕಂಡರೆ ಕೋಪ ಬರುತ್ತದೆ. ನಾವು ಮನುಷ್ಯರನ್ನು ಪ್ರೀತಿಸುವ ಜನ. ಹಿಂದು, ಕ್ರೈಸ್ತ, ಮುಸ್ಲಿಂ ಯಾವ ಧರ್ಮದ ಮನುಷ್ಯರಿದ್ದರೂ ಪ್ರೀತಿಸುತ್ತೇವೆ ಎಂದರು.

ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ
ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ಹೇಳಿದ್ದರು. ಅಭಿವೃದ್ಧಿ ಬಡವರ ಕಾರ್ಯಕ್ರಮದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ, ಬಿಜೆಪಿಯಿಂದ ಕರಾವಳಿ, ಕರ್ನಾಟಕ, ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನಕ್ಕೆ ಅರ್ಥ ಆಗಿದೆ ಎಂದರು.

ಹಿಟ್ಲರ್ ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು?ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ?ಸ್ವಲ್ಪ ದಿನ ಮೆರೆಯುತ್ತಾರೆ ಆಮೇಲೆ ಹಿಡಿಲೇಬೇಕು ಜನ ಬುದ್ಧಿ ಕಳಿಸುತ್ತಾರೆ. ಮೋದಿ ದೇಶದ ಪ್ರಧಾನಿ ರಾಜ್ಯಕ್ಕೆ ಬರಬಹುದು, ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ.ಕರ್ನಾಟಕಕ್ಕೆ 100 ಬಾರಿ ಬಂದರು ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ರಾಜ್ಯದ ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದರು.

ಳೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿರಲಿಲ್ಲ. ಈ ಬಾರಿ ಎರಡು ಅಥವಾ ಮೂರು ಗೆಲ್ಲುತ್ತೇವೆ, ದಕ್ಷಿಣ ಕನ್ನಡದಲ್ಲಿ ಎಂಟು ಕ್ಷೇತ್ರ ಇದೆ ಐದು ಆದರೂ ಗೆಲ್ಲುತ್ತೇವೆ. ಹಿಂದೆ ದಕ್ಷಿಣ ಕನ್ನಡದಲ್ಲಿ ಏಳು ಗೆದ್ದಿದ್ದೇವು. ಬಿಜೆಪಿಯವರು ಒಮ್ಮೆ ಗೆದ್ದರೆ ಅದೇ ಮತ್ತೆ ರಿಪೀಟ್ ಆಗುತ್ತದಾ? ನಮಗೆ ಕುರ್ಚಿ ಮೇಲೆ ಆಸೆ ಅಂತಾರೆ, ಇವರಿಗೆ ಮತ್ತೆ ಯಾವುದರ ಮೇಲೆ ಆಸೆ , ಬಿಟ್ಟುಬಿಡಿ ಹಾಗಾದರೆ ಕುರ್ಚಿ ಆಸೆಯನ್ನು, ಮಗನನ್ನು ಕರೆದುಕೊಂಡು ಹೋಗಿ ಬಿಜೆಪಿ ಅಧ್ಯಕ್ಷರಾಗಿ ಮಾಡಿದ್ದೀರಿ, ಕಾರ್ಯದರ್ಶಿಯಾಗಿ ಮಾಡಿದ್ದೀರಿ, ಈಗ ನಮಗೆ ಕುರ್ಚಿ ಮೇಲೆ ಆಸೆ ಅಂತ ಹೇಳುತ್ತೀರಿ, ಇವರಿಗೆ ಯಾವುದರ ಮೇಲೆ ಆಸೆ ಇದೆ ಹಾಗಾದ್ರೆ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!