ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಜನರೇ ಶಿಕ್ಷೆ ನೀಡುತ್ತಾರೆ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕ ಚಿಕ್ಕ ರೈತರಿಗೆ ನಾವು ಕಿಸಾನ್‌ ಸಮ್ಮಾನ್‌ ನಿಧಿ ನೀಡುತ್ತಿದ್ದೆವು. 6 ಸಾವಿರ ಕೇಂದ್ರ ಸರ್ಕಾರ ನೀಡಿದ್ದರೆ, 4 ಸಾವಿರ ರಾಜ್ಯ ಸರ್ಕಾರ ನೀಡುತ್ತಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಇದನ್ನು ರದ್ದು ಮಾಡಿತು. ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಜನರೇ ಶಿಕ್ಷೆ ನೀಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಚಿಕ್ಕಬಳ್ಲಾಪುರ ಅಭ್ಯರ್ಥಿ ಡಾ. ಕೆ ಸುಧಾಕರ್‌ ಹಾಗೂ ಕೋಲಾರ ಅಭ್ಯರ್ಥಿ ಜೆಡಿಎಸ್‌ನ ಮಲ್ಲೇಶ್‌ ಬಾಬು ಪರ ಮತ ಯಾಚಿಸಿದರು.

‘ಚಿಕ್ಕಬಳ್ಳಾಪುರದ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಂತ ಕೈವಾರಯ್ಯ ತಾತಯ್ಯ, ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು. ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಆದರೆ, ನನಗೆ ದೇಶದ ತಾಯಂದಿರ ಆಶೀರ್ವಾದ ಇದೆ ಎಂದು ಮೋದಿ ಹೇಳಿದರು.

ಇಲ್ಲಿ ನಂದಿ ಹಿಲ್ಸ್‌ ಇದೆ. ತಾಯಿ ಭುವನೇಶ್ವರಿಯ ಆಶೀರ್ವಾದ ಇದೆ. ಈ ಕ್ಷೇತ್ರದಲ್ಲಿ ತೀರ್ಥಯಾತ್ರೆ ಹಾಗೂ ವೀಕೆಂಡ್‌ ಗೇಟ್‌ವೇ ಆರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಏಪ್ರಿಲ್‌ 26ಕ್ಕೆ ವೋಟ್‌ ಹಾಕಬೇಕಿದೆ. ಇದಕ್ಕಾಗಿ ನಿಮ್ಮೆಲ್ಲರಿಗೂ ನಾನು ಪ್ರಾರ್ಥನೆ ಮಾಡುತ್ತೇನೆ. ಚಿಕ್ಕಬಳ್ಳಾಪುರದಿಂದ ಕೆ. ಸುಧಾಕರ್‌ ಹಾಗೂ ಕೋಲಾರದಿಂದ ಮಲ್ಲೇಶ್‌ ಬಾಬು ಅವರನ್ನು ಗೆಲ್ಲಿಸಬೇಕಿದೆ. ನೀವು ಮನೆಮನೆಗಳಿಗೆ ಹೋಗಬೇಕು. ಮೋದಿ ಬಂದಿದ್ದರು. ನಿಮ್ಮೆಲ್ಲರಿಗೂ ನಮಸ್ಕಾರ ತಿಳಿಸಿದ್ದಾರೆ ಎಂದು ಹೇಳಬೇಕು ಎಂದರು.

ದೇಶದಲ್ಲಿ ಮೊದಲ ಹಂತದ ವೋಟಿಂಗ್‌ ಉತ್ಸಾಹ ಹೆಚ್ಚಿದೆ. ಈ ಉತ್ಸಾಹ ಇಲ್ಲಿಯೂ ಕಾಣುತ್ತಿದೆ. ಮೊದಲ ಹಂತದ ಮತದಾನ ಎನ್‌ಡಿಎ ಪರವಾಗಿ ಬಂದಿದೆ. ನಾನು ದೇವೇಗೌಡರಿಗೆ ಆಭಾರಿಯಾಗಿದ್ದೇನೆ. 90ರ ವಯಸ್ಸಿನಲ್ಲೂ ಅವರಲ್ಲಿನ ಉತ್ಸಾಹ, ಬದ್ಧತೆ ನನ್ನಂಥ ಯುವಕರಿಗೂ ಪ್ರೇರಣಾದಾಯಿಯಾಗಿದೆ ಎಂದು ಮೋದಿ ಹೇಳಿದರು.

ದೇವೇಗೌಡರು ಇಂಡಿ ಮೈತ್ರಿಯ ಒಬ್ಬೊಬ್ಬರ ಪಾತ್ರವನ್ನು ತುಂಬಾ ಚೆನ್ನಾಗಿ ಹೇಳಿದರು. ಆದರೆ, ಇಂಡಿ ಮೈತ್ರಿಯಲ್ಲಿ ಯಾರೂ ಲೀಡರ್‌ಗಳಿಲ್ಲ. ಭವಿಷ್ಯದಲ್ಲಿ ಯಾವುದೇ ವಿಷನ್‌ಗಳೂ ಇಲ್ಲ. ಆದರೆ, ಅವರ ಹಿಸ್ಟರಿಯಲ್ಲಿ ಇತಿಹಾಸಗಳೇ ತುಂಬಿದೆ ಎಂದು ವಾಗ್ದಾಳಿ ನಡೆಸಿದರು. .

ಚಿಕ್ಕಬಳ್ಳಾಪುರದ ನೆಲ ಈಗಾಗಲೇ ಮತ್ತೊಮ್ಮೆ ಮೋದಿ ಸರ್ಕಾರ ಎಂದು ತೀರ್ಮಾನ ಮಾಡಿದೆ. ಇಂದು ನಿಮ್ಮ ಎದುರು ನನ್ನ ರಿಪೋರ್ಟ್‌ ಕಾರ್ಡ್‌ ಇಟ್ಟು ಆಶೀರ್ವಾದ ಕೇಳಲು ಬಂದಿದ್ದೇನೆ. ನಿಮ್ಮೆಲ್ಲರನ್ನೂ ನನ್ನ ಪರಿವಾರ ಎಂದುಕೊಂಡಿದ್ದೇನೆ. ನಿಮ್ಮ ಸಲುವಾಗಿ ದಿನರಾತ್ರಿ ಕೆಲಸ ಮಾಡುವ ವಿಚಾರದಲ್ಲಿ ಯಾವುದನ್ನೂ ಕಡಿಮೆ ಮಾಡಿಲ್ಲ. ನಿಮ್ಮ ಕನಸುಗಳೇ ನನ್ನ ಸಂಕಲ್ಪ. ಪ್ರತಿ ಕ್ಷಣ ನಿಮ್ಮ ಹೆಸರಿಗೆ, ಪ್ರತಿ ಕ್ಷಣ ದೇಶದ ಹೆಸರಿಗೆ.. ಇದೇ ಕಾರಣಕ್ಕೆ ಬರೀ ಕೆಲಸ ಮಾತ್ರ ಮಾಡೋದಿಲ್ಲ. ಅದರ ಗ್ಯಾರಂಟಿ ಕೂಡ ನೀಡ್ತೇನೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರದ ಯೋಜನೆಗಳ‌ಫಲಾನುಭವಿಗಳು ಎಸ್ ಸಿ ಎಸ್ಟಿ, ಓಬಿಸಿ ಸಮುದಾಯದ ಜನ. ನಾವು ಬರುವುದಕ್ಕೆ ಮುಂಚೆ ಕೊಳಗೇರಿ ಗಳಲ್ಲಿ ಬದುಕುತ್ತಿದ್ದರು. ಈಗ ನೀರು,ವಿದ್ಯುತ್, ದೀಪ ಅವರಿಗೆ ಸಿಗುತ್ತಿದೆ. ಇಲ್ಲಿನ ನೀರಿನ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಅಮೃತ ಸರೋವರ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇಲ್ಲಿಯ 2.70 ಲಕ್ಷ ಮಂದಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ. ಹಿಂದಿನ ಹತ್ತು ವರ್ಷಗಳಲ್ಲಿ ಚಿಕ್ಕಬಳ್ಳಾಪುರದಲ್ಲಿ 14 ಕೋಲಾರ 24 ಸಾವಿರ ಮನೆ ನಿರ್ಮಾಣ ಮಾಡಿ ನೀಡಲಾಗಿದೆ. ಮೋದಿ ಸರ್ಕಾರ ಹೊಸ ಮನೆಗಳ ನಿರ್ಮಾಣ ಭರವಸೆ ನೀಡಿದೆ. ಯಾರಿಗೆ ಸಿಕ್ಕಿಲ್ಲ ಮುಂದೆ ಸಿಗಲಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!