May 23, 2026
Saturday, May 23, 2026
spot_img

ಡಯಾಬಿಟಿಸ್ ರೋಗಿಗಳಿಗೆ ಪರ್ಫೆಕ್ಟ್ ಸ್ನ್ಯಾಕ್ಸ್: ಆರೋಗ್ಯಕ್ಕೂ ಬೆಸ್ಟ್‌, ರುಚಿಗೂ ಸೈ ಈ ಗರಿಗರಿಯಾದ ಹಾಗಲಕಾಯಿ ಫ್ರೈ!

ಹಾಗಲಕಾಯಿ ಅಂದ ತಕ್ಷಣ ಹೆಚ್ಚಿನವರು ಅದರ ಕಹಿಯ ಕಾರಣಕ್ಕಾಗಿ ದೂರ ಸರಿಯುತ್ತಾರೆ. ಆದರೆ, ಅದೇ ಹಾಗಲಕಾಯಿಯನ್ನು ಬಳಸಿ ಗರಿಗರಿಯಾದ ‘ಹಾಗಲಕಾಯಿ ಚಿಪ್ಸ್’ಮಾಡಿದರೆ, ಮಕ್ಕಳು ಸೇರಿದಂತೆ ಮನೆಯವರೆಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಿರುತ್ತವೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಇದು ಸಹಕಾರಿಯಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಹಾಗಲಕಾಯಿ
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಕಾರ್ನ್‌ಫ್ಲೋರ್
ಅಚ್ಚಖಾರದ ಪುಡಿ
ಗರಂ ಮಸಾಲಾ
ಅರಿಶಿನ
ಜೀರಿಗೆ ಪುಡಿ
ನಿಂಬೆಹಣ್ಣಿನ ರಸ
ಉಪ್ಪು
ಎಣ್ಣೆ

ಮಾಡುವ ವಿಧಾನ:

ಮೊಲು ಹಾಗಲಕಾಯಿಯನ್ನು ತೊಳೆದು, ತೆಳುವಾದ ಚಕ್ರಗಳಂತೆ ಹೆಚ್ಚಿಕೊಳ್ಳಬೇಕು. ಒಳಗಿನ ಬಲಿತ ಬೀಜಗಳನ್ನು ತೆಗೆಯಬೇಕು. ಹೆಚ್ಚಿದ ಹಾಗಲಕಾಯಿಗೆ 1 ಚಮಚ ಉಪ್ಪು ಮತ್ತು 1 ಚಮಚ ಲಿಂಬೆರಸ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 15-20 ನಿಮಿಷ ಪಕ್ಕಕ್ಕೆ ಇಡಬೇಕು. 20 ನಿಮಿಷಗಳ ನಂತರ ಹಾಗಲಕಾಯಿ ನೀರು ಬಿಡುತ್ತದೆ. ಆ ನೀರನ್ನು ಕೈಯಿಂದ ಚೆನ್ನಾಗಿ ಹಿಂಡಿ ಹೊರಗೆ ಹಾಕಿದರೆ. ಹಾಗಲಕಾಯಿಯ ಕಹಿ ಅಂಶ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

ನಂತರ ಹಿಂಡಿ ಇಟ್ಟುಕೊಂಡ ಹಾಗಲಕಾಯಿ ಚೂರುಗಳಿಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್, ಖಾರದ ಪುಡಿ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ಸ್ವಲ್ಪ ಉಪ್ಪು ಸೇರಿಸಿ. ನೀರು ಹಾಕದೆ ಒಣ ಹಿಟ್ಟಿನಲ್ಲೇ ಹಾಗಲಕಾಯಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟು ಹಾಗಲಕಾಯಿಗೆ ಚೆನ್ನಾಗಿ ಅಂಟಿಕೊಳ್ಳಲು ಅಗತ್ಯವಿದ್ದರೆ ಮಾತ್ರ 1 ಚಮಚ ನೀರನ್ನು ಚಿಮುಕಿಸಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಚೆನ್ನಾಗಿ ಕಾಯಿಸಿಕೊಂಡು,ಎಣ್ಣೆ ಕಾದ ನಂತರ ಮಸಾಲೆ ಸವರಿದ ಹಾಗಲಕಾಯಿ ಚೂರುಗಳನ್ನು ಒಂದೊಂದಾಗಿ ಎಣ್ಣೆಗೆ ಹಾಕಬೇಕು ಹಾಗಲಕಾಯಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿ, ಪೂರ್ತಿ ಕ್ರಿಸ್ಪಿ ಆಗುವವರೆಗೆ ಎರಡೂ ಕಡೆ ಚೆನ್ನಾಗಿ ಕರಿಯಬೇಕು. ಬಳಿಕ ಎಣ್ಣೆಯಿಂದ ಹೊರಗೆ ತೆಗೆದರೆ ಗರಿಗರಿಯಾದ ಹಾಗಲಕಾಯಿ ಚಿಪ್ಸ್ ಸಿದ್ಧವಾಗುತ್ತದೆ. ಇದನ್ನು ಸಂಜೆ ಚಹಾದೊಂದಿಗೆ ಸವಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !