July 28, 2026
Tuesday, July 28, 2026
spot_img

ಸಂಜೆ ಚಹಾ ಸಮಯಕ್ಕೆ ಪರ್ಫೆಕ್ಟ್ ಸ್ನ್ಯಾಕ್ಸ್‌: ಇಲ್ಲಿದೆ ಬೇಸನ್ ಕಚೋರಿ ಮಾಡುವ ಸುಲಭ ರೆಸಿಪಿ

ಬೇಸನ್ ಕಚೋರಿ ಹೊರಗಡೆ ಗರಿಗರಿಯಾಗಿ ಮತ್ತು ಒಳಗಡೆ ಮಸಾಲೆಯುಕ್ತವಾಗಿರುವ ಒಂದು ಅದ್ಭುತವಾದ ತಿಂಡಿಯಾಗಿದೆ. ಇದನ್ನು ಸಂಜೆಯ ಚಹಾ ಸಮಯಕ್ಕೆ ಅಥವಾ ಹಬ್ಬದ ದಿನಗಳಲ್ಲಿ ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು.

ಬೇಕಾಗುವ  ಸಾಮಗ್ರಿಗಳು:

ಮೈದಾ ಹಿಟ್ಟು

ಓಮು (ಅಜ್ವೈನ್)

ಎಣ್ಣೆ ಅಥವಾ ತುಪ್ಪ

ಉಪ್ಪು ಮತ್ತು ನೀರು

ಕಡಲೆಹಿಟ್ಟು

ಜೀರಿಗೆ ಮತ್ತು ಇಂಗು

ಸೋಂಪು ಪುಡಿ ಮತ್ತು ಧನಿಯಾ ಪುಡಿ

ಖಾರದ ಪುಡಿ ಮತ್ತು ಗರಂ ಮಸಾಲ

ಆಮ್‌ಚೂರ್ ಪುಡಿ

ಎಣ್ಣೆ

ತಯಾರಿಸುವ ವಿಧಾನ

ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ಓಮು, ಉಪ್ಪು ಮತ್ತು ಕಾಲು ಕಪ್ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಶ್ರಣವು ಬ್ರೆಡ್ ಪುಡಿಯಂತೆ ಕಾಣಬೇಕು. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ಹಿಟ್ಟನ್ನು ಕಲಸಿ, 20 ನಿಮಿಷಗಳ ಕಾಲ ಒದ್ದೆ ಬಟ್ಟೆ ಮುಚ್ಚಿ ಇಡಬೇಕು. ನಂತರ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಜೀರಿಗೆ, ಇಂಗು ಮತ್ತು ಒಣ ಮಸಾಲೆಗಳನ್ನು ಹಾಕಿ ಲಘುವಾಗಿ ಹುರಿದು. ನಂತರ ಕಡಲೆಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಒಳ್ಳೆಯ ಸುವಾಸನೆ ಬರುವವರೆಗೆ ಮತ್ತು ಬಣ್ಣ ಬದಲಾಗುವವರೆಗೆ ಹುರಿದುಕೊಂಡು. ಕೊನೆಯಲ್ಲಿ ಆಮ್‌ಚೂರ್ ಮತ್ತು ಗರಂ ಮಸಾಲ ಸೇರಿಸಿ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು.

ನಂತರ ಕಲಸಿದ ಮೈದಾ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಕೈಯಿಂದ ಅಥವಾ ಲಟ್ಟಣಿಗೆಯಿಂದ ಸಣ್ಣ ಪೂರಿಯಂತೆ ಲಟ್ಟಿಸಿ. ಅದರ ಮಧ್ಯದಲ್ಲಿ ಒಂದು ಚಮಚ ಸಿದ್ಧಪಡಿಸಿದ ಬೇಸನ್ ಮಸಾಲೆಯನ್ನು ಇಟ್ಟು, ಅಂಚುಗಳನ್ನು ಒಟ್ಟಿಗೆ ಸೇರಿಸಿ ಮುಚ್ಚಿ. ನಂತರ ಅಂಗೈಯಿಂದ ಲಘುವಾಗಿ ಒತ್ತಿ ಚಪ್ಪಟೆ ಮಾಡಿ. ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಅತಿಯಾಗಿ ಕಾಯ್ದಿರಬಾರದು. ಕಚೋರಿಗಳನ್ನು ಎಣ್ಣೆಗೆ ಹಾಕಿ, ಕಡಿಮೆ ಉರಿಯಲ್ಲಿ ಎರಡು ಬದಿಯೂ ಹೊಂಬಣ್ಣ ಬಂದು ಗರಿಗರಿಯಾಗುವವರೆಗೆ ನಿಧಾನವಾಗಿ ಕರಿದರೆ ಬೇಸನ್ ಕಚೋರಿ ರೆಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !