5- 8ನೇ ತರಗತಿ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆಗೆ ಅನುಮತಿ: ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ( 5th and 8th School Students ) ಮೌಲ್ಯಾಂಕನ ಪರೀಕ್ಷೆ ನಡೆಸಲು ಹೈಕೋರ್ಟ ಅನುಮತಿ ನೀಡಿದ ಬೆನ್ನಲ್ಲೇ ಶಿಕ್ಷಣ ಇಲಾಖೆ ಮೌಲ್ಯಾಂಕನ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಇಂದು ಕರ್ನಾಟಕ ಶಾಲಾ ಗುಣಮಟ್ಟ, ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತಿನ ಕಾರ್ಯನಿರ್ವಾಹ ನಿರ್ದೇಶಕರು ಮಾಹಿತಿ ನೀಡಿದ್ದಾರೆ.   ಮಾ.27 ರಿಂದ ಮಾ.30  ರವೆರೆಗ 5ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ ಮಾ.27 ರಿಂದ ಏ.01 ರವರೆಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಪರೀಕ್ಷೆ ವೇಳಾಪಟ್ಟಿ

5ನೇ ತರಗತಿ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ

ಮಾ.27 ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು
ಮಾ.28 ಮಂಗಳವಾರ – ದ್ವಿತೀಯ ಭಾಷೆ – ಕನ್ನಡ, ಇಂಗ್ಲೀಷ್
ಮಾ.29-2023ರ ಬುಧವಾರ – ಕೋರ್ ವಿಷಯ – ಪರಿಸರ ಅಧ್ಯಯನ
ಮಾ.30 ಗುರುವಾರ – ಕೋರ್ ವಿಷಯ – ಗಣಿತ

8ನೇ ತರಗತಿ ಪಬ್ಲಿಕ್ ಪರೀಕ್ಷೆ ವೇಳಾಪಟ್ಟಿ

ಮಾ.27 ಸೋಮವಾರ – ಪ್ರಥಮ ಭಾಷೆ – ಕನ್ನಡ, ಇಂಗ್ಲೀಷ್, ಇಂಗ್ಲೀಷ್ ( NCERT), ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು, ಸಂಸ್ಕೃತ
ಮಾ.28 ಮಂಗಳವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
ಮಾ.29 ಬುಧವಾರ – ತೃತೀಯ ಭಾಷೆ – ಹಿಂದಿ, ಹಿಂದಿ ( NCERT), ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
ಮಾ.30 ಗುರುವಾರ – ಕೋರ್ ವಿಷಯ – ಗಣಿತ
ಮಾ.31 ಶುಕ್ರವಾರ – ಕೋರ್ ವಿಷಯ – ವಿಜ್ಞಾನ.
ಏ.01 ಶನಿವಾರ – ಕೋರ್ ವಿಷಯ – ಸಮಾಜ ವಿಜ್ಞಾನ.

ಇಲ್ಲಿ ಮಾ.30 ರಂದು ನಡೆಯುವ ಗಣಿತ ವಿಷಯದ ಪರೀಕ್ಷೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ನಿಗದಿಪಡಿಸಲಾಗಿದೆ. ಉಳಿದ ಎಲ್ಲಾ ದಿನಗಳ ಪರೀಕ್ಷೆ ಮಧ್ಯಾಹ್ನ 2.30ರಿಂದ 4.30ರವರೆಗೆ ನಡೆಯಲಿದೆ.
ಪ್ರತಿ ಪರೀಕ್ಷೆಗೆ 2 ಗಂಟೆಗಳ ಅವಧಿಯನ್ನು ನಿಗದಿಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!