Saturday, March 25, 2023

Latest Posts

ಬೆಂಗಳೂರು ನಗರಕ್ಕೆ ಮಧ್ಯಮ, ಲಘು ಸಾಗಾಣಿಕೆ ವಾಹನಕ್ಕೆ ಎಂಟ್ರಿ: ಮುಷ್ಕರ ವಾಪಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಬೆಂಗಳೂರು ನಗರದಲ್ಲಿ ಮಧ್ಯಮ, ಲಘು ವಾಹನಗಳು ನಗರ ಪ್ರವೇಶಿಸಲು ಪೊಲೀಸ್ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಲಾರಿ ಮಾಲೀಕರು ಮುಷ್ಕರ ವಾಪಸ್ ಪಡೆದಿದ್ದಾರೆ.

7.5 ಮೆಟ್ರಿಕ್ ಟನ್ ಲಗೇಜ್ ಹೊತ್ತ ವಾಹನ ಬೆಂಗಳೂರು ನಗರದಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಈ ಹಿನ್ನೆಲೆ ಮಧ್ಯರಾತ್ರಿಯಿಂದ ಕರ್ನಾಟಕದ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟ ನೀಡಿದ್ದ ಮುಷ್ಕರ ವಾಪಸ್ ಪಡೆದಿದೆ.

ವಾಣಿಜ್ಯ ವಾಹನಗಳ ಎಫ್‌.ಸಿ ನವೀಕರಣಕ್ಕೆ ಕ್ಯೂಆರ್‌ ಕೋಡ್‌ ಇರುವ ರೆಟ್ರೋ ರಿಫ್ಲೆಕ್ಟರ್‌ ಟೇಪ್ ಅಳವಡಿಸಿಕೊಂಡು ಬರುವಂತೆ ಸರ್ಕಾರ ಹೊರಡಿಸಿದ್ದ ಆದೇಶ ವಿರೋಧಿಸಿ ಮುಷ್ಕರಕ್ಕೆ ಮುಂದಾಗಿದ್ದರು. ಇಂದು ಮಧ್ಯರಾತ್ರಿಯಿಂದಲೇ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!