ಇನ್‍ಸ್ಟಾಗ್ರಾಂನಲ್ಲಿ ಮತದಾನದ ಲೈವ್ ಮಾಡಿದ ವ್ಯಕ್ತಿ: ರೀ ವೋಟಿಂಗ್ ಗೆ ಚುನಾವಣಾ ಆಯೋಗ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗುಜರಾತ್‍ನ ದಾಹೋದ್ ಲೋಕಸಭಾ ಕ್ಷೇತ್ರದ ಪಾರ್ಥಂಪುರ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬ ಮತದಾನ ಮಾಡುವಾಗ ಇನ್‍ಸ್ಟಾಗ್ರಾಂನಲ್ಲಿ ಲೈವ್ ಮಾಡಿದ ಕಾರಣಕ್ಕೆ ಮೇ 11 ರಂದು ಮರು ಮತದಾನಕ್ಕೆ ಚುನಾವಣಾ ಆಯೋಗ (ECI) ಆದೇಶಿಸಿದೆ.

ಮೇ 7 ರಂದು ನಡೆದಿದ್ದ ಚುನಾವಣೆಯಲ್ಲಿ) ವ್ಯಕ್ತಿ ಮತದಾನ ಮಾಡುವಾಗ ಲೈವ್ ಸ್ಟ್ರೀಮ್ ಮಾಡಿದ್ದ. ಅದರ ವೀಡಿಯೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಚುನಾವಣಾ ಸಿಬ್ಬಂದಿ ಹಾಗೂ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ಗುಜರಾತ್‍ನ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಮತದಾನದ ವೀಡಿಯೋ ವೈರಲ್ ಆಗುತ್ತಿದ್ದಂತೆ, ವೀಕ್ಷಕರು ಸಲ್ಲಿಸಿದ ವರದಿಯನ್ನು ಗಣನೆಗೆ ತೆಗೆದುಕೊಂಡು ಮತದಾನವನ್ನು ಚುನಾವಣಾ ಆಯೋಗವು ಅಸಿಂಧು ಎಂದು ಘೋಷಿಸಿತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 58(2)ರ ಅಡಿಯಲ್ಲಿ ಮೇ 7 ರಂದು ಮತಗಟ್ಟೆಯಲ್ಲಿ ನಡೆದ ಮತದಾನವನ್ನು ಅನೂರ್ಜಿತ ಎಂದು ಘೋಷಿಸಿಸಲಾಗಿದ್ದು, ಮೇ 11 ರಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತಗಟ್ಟೆಯಲ್ಲಿ ಮರು ಮತದಾನವನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!