ಏರ್ ಇಂಡಿಯಾ ಸಿಬ್ಬಂದಿಗಳ ವಜಾ ಆದೇಶ ವಾಪಾಸ್: ಮರಳಿ ಕೆಲಸಕ್ಕೆ ಬರಲು ಸಮ್ಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏರ್ ಇಂಡಿಯಾ ವಿಮಾನ ಸಂಸ್ಥೆ ತನ್ನ 30 ಉದ್ಯೋಗಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಒಪ್ಪಿಕೊಂಡಿದೆ.

ಸಂಸ್ಥೆ ಹೇಳದೆ ಕೇಳದೆ ರಜಾ ಹಾಕಿದ್ದರಿಂದ ತನ್ನ 30 ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡಿತ್ತು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ 2 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ವಜಾಗೊಂಡಿರುವ ಎಲ್ಲಾ ಕ್ಯಾಬಿನ್ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಪ್ಪಿಕೊಂಡಿದೆ.

ಇಂದು ಮಧ್ಯಾಹ್ನ 2 ಗಂಟೆಗೆ ಮುಖ್ಯ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಡಳಿತವು ಪ್ರತಿಭಟನಾ ನಿರತ ಸಿಬ್ಬಂದಿಯನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಬ್ಬಂದಿಯನ್ನು ವಜಾಗೊಳಿಸಿದ್ದರಿಂದ ಮಂಗಳವಾರ ರಾತ್ರಿಯಿಂದ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು. ಮುಂಚಿತ ಸೂಚನೆಯಿಲ್ಲದೆ ಸಾಮೂಹಿಕವಾಗಿ ಅನಾರೋಗ್ಯ ರಜೆಗೆ ತೆರಳಿದ ಕ್ಯಾಬಿನ್ ಸಿಬ್ಬಂದಿಯ ಸೇವೆಗಳನ್ನು ಕೊನೆಗೊಳಿಸುವುದಾಗಿ ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಕ್ರಮವು ಬಂದಿದೆ.ಎಲ್ಲರು ಮತ್ತೆ ಕರ್ತವ್ಯಕ್ಕೆ ಸೇರಲು ಏರ್ ಇಂಡಿಯಾ ಸೂಚನೆ ನೀಡಿದೆ

ಏರ್‌ಲೈನ್ ನಂತರ ಪರಿಷ್ಕೃತ ಹಾರಾಟದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ತಮ್ಮ ವಿಮಾನವು ಅಡಚಣೆಯಿಂದ ಪ್ರಭಾವಿತವಾಗಿದೆಯೇ ಎಂದು ಪರಿಶೀಲಿಸಲು ಜನರ ಬಳಿ ಮನವಿ ಮಾಡಿತು. ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತು. ಕ್ಯಾಬಿನ್ ಸಿಬ್ಬಂದಿಯ ಕೊರತೆಯ ನಡುವೆ ಅದರ ದೈನಂದಿನ ನಿಗದಿತ ವಿಮಾನಗಳಲ್ಲಿ ಸುಮಾರು ಶೇ. 20ರಷ್ಟು ಪರಿಣಾಮ ಬೀರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!