ಕಾಶ್ಮೀರಿ ಪಂಡಿತರ ಹತ್ಯೆ ಮರು ತನಿಖೆಗೆ ಕೋರಿ ಅರ್ಜಿ: ಸುಪ್ರೀಂಕೋರ್ಟ್‌ ನಿಂದ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಿಸಿದಂತೆ ಹೊಸ ಎಫ್‌ಐಆರ್‌ಗಳ ನೋಂದಣಿ, ಮರು ತನಿಖೆ ಮತ್ತು ಬಾಕಿ ಉಳಿದಿರುವ ಪ್ರಕರಣಗಳ ತ್ವರಿತ ವಿಲೇವಾರಿ ಕೋರಿ ಸಲ್ಲಿಸಿದ್ದ ಕ್ಯೂರೆಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

‘ರೂಟ್ಸ್ ಇನ್ ಕಾಶ್ಮೀರ’ 2017 ರಲ್ಲಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಡಿವೈ ಚಂದ್ರಚೂಡ್ ವಜಾ ಮಾಡಿದರು.

1989 ಮತ್ತು 1998 ರ ನಡುವೆ 700 ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡಲಾಗಿದೆ ಮತ್ತು 200 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ ಒಂದೇ ಒಂದು ಎಫ್‌ಐಆರ್ ಕೂಡಾ ಚಾರ್ಜ್ಶೀಟ್ ಅಥವಾ ಶಿಕ್ಷೆಯ ಹಂತವನ್ನು ತಲುಪಿಲ್ಲ. ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ತನಿಖೆ ನ್ಯಾಯವನ್ನು ನೀಡಿಲ್ಲ. 1989 ರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತರ ಬಗ್ಗೆ ಹೊಸ ಐಎಫ್‌ಆರ್ ದಾಖಲಿಸುವುದು ಅಥಾವಾ ಮರು ತನಿಖೆಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಘಟನೆ ಸಂಭವಿಸಿ 27 ವರ್ಷಗಳು ಕಳೆದಿರುವುದರಿಂದ ತನಿಖೆಯ ಮೂಲಕ ಯಾವುದೇ ಫಲಪ್ರದ ಫಲಿತಾಂಶ ಹೊರಹೊಮ್ಮುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿ ಜೆಎಸ್ ಖೇಹರ್ ನೇತೃತ್ವದ ಪೀಠ 2017ರಲ್ಲಿ ಈ ಅರ್ಜಿಯನ್ನು ವಜಾ ಮಾಡಿತ್ತು. ಇದೇ ಅಂಶಗಳನ್ನು ಉಲ್ಲೇಖಿಸಿದ ಸಿಜೆಐ ಡಿವೈ ಚಂದ್ರಚೂಡ್ ಅರ್ಜಿಯನ್ನು ವಜಾಗೊಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!