October 15, 2026
Thursday, October 15, 2026
spot_img

ದೇಶದ ಜನರಿಗೆ ಗಾಯದ ಮೇಲೆ ಬರೆ, ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇರಾನ್‌-ಅಮೆರಿಕ ಯುದ್ಧ ನಿಲ್ಲದ ಹಿನ್ನೆಲೆ ಬೇರೆ ದೇಶಗಳಿಗೂ ಸಮಸ್ಯೆ ಆಗುತ್ತಲೇ ಇದೆ. ಈಗಷ್ಟೇ ಪೆಟ್ರೋಲ್‌ -ಡಿಸೇಲ್‌ ದರ ಏರಿಕೆಯನ್ನು ಅರಗಿಸಿಕೊಂಡಿಲ್ಲದ ಜನತೆಗೆ ಮತ್ತೆ ದರ ಏರಿಕೆ ಬಿಸಿ ಮುಟ್ಟಿದೆ.

ಇಂದು ತೈಲ ಕಂಪನಿಗಳು ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆಯನ್ನು ಲೀಟರ್‌ಗೆ 90 ಪೈಸೆ ಹೆಚ್ಚಿಸಿವೆ. ಒಂದೇ ವಾರದಲ್ಲಿ ಎರಡು ಬಾರಿ ರೇಟ್‌ ಹೆಚ್ಚಳವಾಗಿದ್ದು, ಜನ ಹೈರಾಣಾಗಿದ್ದಾರೆ.

ನಾಲ್ಕು ದಿನದ ಹಿಂದಷ್ಟೇ ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 94.77 ರೂ. ನಿಂದ 97.77 ರೂ.ಗಳಿಗೆ ತಲುಪಿತ್ತು, ಡೀಸೆಲ್‌ ಲೀಟರ್‌ಗೆ 87.67 ರೂ. ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿತ್ತು. ಇದೀಗ ಮತ್ತೊಮ್ಮೆ ದರ ಏರಿಕೆಯಾಗಿದ್ದು, ಜನರ ಗಾಯದ ಮೇಲೊಂದು ಬರೆ ಬಿದ್ದಿದೆ.

Must Read