September 10, 2026
Thursday, September 10, 2026
spot_img

ಕಣ್ತೆಗೆದು ನ್ಯೂಸ್‌ ನೋಡಿದ ಜನತೆಗೆ ಶಾಕ್‌: ಪೆಟ್ರೋಲ್-ಡೀಸೆಲ್ ದರ ಲೀಟರ್‌ಗೆ 3.21 ರೂ. ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆ ಕಣ್ತೆಗೆದು ನ್ಯೂಸ್‌ ನೋಡಿದ ಜನತೆಗೆ ಶಾಕ್‌ ಆಗಿದ್ದು, ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲೆ 3 ರಿಂದ 4 ರೂಪಾಯಿ ದರ ಹೆಚ್ಚಳವಾಗಿದೆ.

ಬೈಕ್‌ ಹಾಗೂ ಕಾರುಗಳ ಮೇಲೆ ಅವಲಂಬಿತರಾಗಿರುವವರಿಗೆ ಬೆಲೆ ಏರಿಕೆಯಿಂದ ಸಮಸ್ಯೆಯಾಗಿದ್ದು, ಕ್ಯಾಬ್‌ ಚಾಲಕರಿಗೂ ಸಂಕಷ್ಟವಾಗಿದೆ.

ಡೀಸೆಲ್‌ ದರ ಏರಿಕೆಯಿಂದ ಸರಕು ಸಾಗಣೆ ವಾಹನಗಳ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಇದರಿಂದಾಗಿ ತರಕಾರಿ ಹಾಗೂ ದಿನಸಿ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !