Sunday, March 26, 2023

Latest Posts

ಪಿಎಫ್‌ಐ ನಿಷೇಧಿಸುವ ಮೂಲಕ ದೇಶದ್ರೋಹಿಗಳಿಗೆ ಬಿಜೆಪಿಯಿಂದ ತಕ್ಕ ಉತ್ತರ: ಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಿಎಫ್‌ಐ ನಿಷೇಧಿಸುವ ಮೂಲಕ ದೇಶದ್ರೋಹಿಗಳಿಗೆ ತಕ್ಕ ಉತ್ತರ ನೀಡುವ ಕೆಲಸವನ್ನು ಬಿಜೆಪಿ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಸುರಕ್ಷಿತ ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಟಿಪ್ಪು ಆರಾಧಕರಿಗೆ ಮತ ನೀಡದಿರಿ. ರಾಣಿ ಅಬ್ಬಕ್ಕರ ಆರಾಧನೆ ಮಾಡುವ ನಮಗೆ ಮತ ನೀಡಿ. ನಮಗೆ ನೀಡುವ ಒಂದೊಂದು ಮತವೂ ನವ ಭಾರತ ನಿರ್ಮಾಣಕ್ಕೆ ನೀಡುವ ಮತವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ಕರ್ನಾಟಕ ಸುರಕ್ಷಿತವಾಗಿರಲಿದೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ರಾಜ್ಯದ ಏಳಿಗೆಗಾಗಿ ಶ್ರಮಿಸುತ್ತಿಲ್ಲ. ರೈತರ ಕಲ್ಯಾಣ ಮಾಡಿದ ಕೆಲಸದಿಂದ ಯಡಿಯೂರಪ್ಪ ಅವರನ್ನು ದೇಶದ ಪ್ರತಿ ಜನರು ನೆನಪಿಸುತ್ತಾರೆ. ಚುನಾವಣಾ ಪ್ರಚಾರಕ್ಕಾಗಿ ಇನ್ನೊಮ್ಮೆ ನಿಮ್ಮ ಜಿಲ್ಲೆಗೆ ಬರುತ್ತೇನೆ ಎಂದವರು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಎಸ್. ಸುನಿಲ್ ಕುಮಾರ್. ಎಸ್. ಅಂಗಾರ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!