ದಿಗಂತ ವರದಿ ಬಾಗಲಕೋಟೆ:
ಯಾರೋ ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಲ್ಲಿ ಅಧಿಕಾರದ ಮಜಾ ಮಾಡುತ್ತಿದ್ದಿ, ಆ ಸಂಸ್ಥೆ ಬಿಟ್ಟು ಹೊರಗಡೆ ಬಂದು ಸ್ವಂತ ಸಂಸ್ಥೆ , ಕಾರ್ಖಾನೆ ಕಟ್ಟು ಆಗ ನಿನ್ನ ಯೋಗ್ಯತೆ ಗೊತ್ತಗಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ವಿರುದ್ದ ಆಕ್ರೋಶ ಹೊರಹಾಕಿದರು.
ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ನಾರಾಯಣಸ್ವಾಮಿ ಶೆಡ್ ಗಿರಾಕಿ, ನಾನು ಧನಾ ಕಾಯುವ ಎಂದು ಹೇಳಿಕೆ ನೀಡಿರುವ ಎಂ.ಬಿ.ಪಾಟೀಲ ತನ್ನ ಯೋಗ್ಯತೆ ಏನೆಂಬುದು ಜನರಿಗೆ ಗೊತ್ತಿದೆ ಎಂದರು.
ನಾನು ಮಂತ್ರಿಯಾಗಿ, ಒಬ್ಬ ಉದ್ಯಮಿಯಾಗಿ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ ನಿನ್ನ ಕೊಡುಗೆ ಏನು ಎಂದು ಪ್ರಶ್ನಿಸಿದರು. ಬಂತನಾಳ ಸ್ವಾಮೀಜಿ, ಹಳಕಟ್ಟಿ ಯವರು ಕಟ್ಟಿದ ಸಂಸ್ಥೆಯ ಲ್ಲಿ ಗೌಡಕಿದರ್ಪ, ಅಧಿಕಾರ ದರ್ಪ ತೋರಿಸುವುದನ್ನು ಬಿಡು. ಯಾರೋ ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಲ್ಲಿ ಮಜಾ ಮಾಡಿಕೊಂಡು ಇದ್ದೀಯಾ. ಸಂಸ್ಥೆ ಬಿಟ್ಟ ಹೊರಗ ಬಂದ ನಿನ್ನ ಯೋಗ್ಯತೆ ತೋರಿಸು ಎಂದರು.
ಬಸವೇಶ್ವರ ಸಕ್ಕರೆ ಕಾರ್ಖಾನೆ ಕಟ್ಟು ತ್ತೇನೆ ಎಂದು ರೈತರ ಜಮೀನು ಕಡಿಮೆ ದರದಲ್ಲಿ ಖರೀದಿಸಿ, ರೈತರ ಮಕ್ಕಳಿಗೆ ಉದ್ಯೋಗ ನೀಡುತ್ತೇವೆ ಎಂದು ಜನರನ್ನುನಂಬಿಸಿ ಜಮೀನು ಖರೀದಿ ಮಾಡಿ ಈಗ ತಮಿಳುನಾಡಿನವರಿಗೆ ಮಾರಿದ್ದು ಗೊತ್ತಿದೆ. ಕೆಐಡಿಬಿಯಿಂದ ಡಮ್ಮಿಯವರ ಹೆಸರಿನಲ್ಲಿ ನಿವೇಶನ ಖರೀದಿಸಿ ,ತಾವು ಆಸ್ತಿ ಮಾಡಿಕೊಂಡಿದ್ದು ಗೊತ್ತಿದೆ.ಎಲ್ಲ ನಿನ್ನ ಬಂಡವಾಳ ಬಿಚ್ಚಿಡುವೆ. ಕೈಗಾರಿಕೆ ಕಟ್ಟಿ ಎಷ್ಟು ಜನರಿಗೆ ಉದ್ಯೋಗ ನೀಡಿದ್ದೀಯಾ ಹೇಳು. ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಎಂ.ಬಿ.ಪಾಟೀಲರಿಗೆ ಗದರಿಸಿದರು.
ರಾಜಕೀಯಕ್ಕೆ ಬಂದ ನಂತರ ಹಾಗೂ ನೀರಾವರಿ ಸಚಿವರಾದಬಳಿಕ ಒಂದು ಭ್ರಷ್ಟಾಚಾರ, ಯಾರದೂ ಆಸ್ತಿ ಕಬಳಸಿಲ್ಲ ಎಂದು ನಿನ್ನ ತಂದೆ,ತಾಯಿ ಮೇಲೆ ಆಣೆ ಮಾಡಿ ಹೇಳಿ ಎಂದು ಪಾಟೀಲರಿಗೆ ಸವಾಲು ಹಾಕಿದರು.