1 ಟ್ರಿಲಿಯನ್‌ ಡಾಲರ್‌ ವಹಿವಾಟು ದಾಖಲೆ ಬರೆದ ಫೋನ್‌ ಪೇ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದ ಪ್ರಸಿದ್ಧ ಡಿಜಿಟಲ್‌ ಪಾವತಿ ಪ್ಲಾಟ್‌ ಪಾರ್ಮ್‌ ಫೋನ್‌ ಪೇ ಈಗ ಹೊಸದೊಂದು ದಾಖಲೆ ಬರೆದಿದ್ದು 1 ಟ್ರಿಲಿಯನ್‌ ಡಾಲರುಗಳ ವಾರ್ಷಿಕ ವಹಿವಾಟು ಪೂರೈಸಿದೆ. ಈ ಕುರಿತು ಕಂಪನಿ ಅಧಿಕೃತ ಪ್ರಕಟಣೆ ನೀಡಿದ್ದು ಇದು ಮುಖ್ಯವಾಗಿ UPI ವಹಿವಾಟುಗಳಲ್ಲಿ 1 ಟ್ರಿಲಿಯನ್ ಡಾಲರ್ ಅಥವಾ 84 ಲಕ್ಷ ಕೋಟಿ ರೂ. ವಾರ್ಷಿಕ ಒಟ್ಟು ಪಾವತಿ ಮೌಲ್ಯ (TPV) ರನ್‌ರೇಟ್ ಅನ್ನು ತಲುಪಿದೆ.

ಡಿಸೆಂಬರ್‌ 2015ರಲ್ಲಿ ಫೋನ್‌ ಪೇ ಯನ್ನು ಸ್ಥಾಪಿಸಲಾಗಿದ್ದು ಈಗ ಭಾರತದ ಅತ್ಯಂತ ದೊಡ್ಡ ಆನ್‌ಲೈನ್‌ ವಹಿವಾಟು ಫ್ಲಾಟ್‌ಫಾರ್ಮಗಳಲ್ಲಿ ಒಂದೆನಿಸಿದೆ. ಫಿನ್‌ಟೆಕ್ ಸಂಸ್ಥೆಯು ಭಾರತದಲ್ಲಿ 99 ಪ್ರತಿಶತ ಪಿನ್ ಕೋಡ್‌ಗಳನ್ನು ಒಳಗೊಂಡಿರುವ ಶ್ರೇಣಿ 2, 3, 4 ನಗರಗಳು ಮತ್ತು ಅದರಾಚೆಗೆ ಹರಡಿರುವ 35 ಮಿಲಿಯನ್‌ಗಿಂತಲೂ ಹೆಚ್ಚು ಆಫ್‌ಲೈನ್ ವ್ಯಾಪಾರಿಗಳನ್ನು ಡಿಜಿಟಲೀಕರಣಗೊಳಿಸಿದೆ ಎಂದು ಹೇಳಿಕೊಂಡಿದೆ.

“ಕಂಪನಿಯು ತನ್ನ ಪಿಎ (ಪಾವತಿ ಸಂಗ್ರಾಹಕ) ಪರವಾನಗಿಗಾಗಿ ಆರ್‌ಬಿಐನಿಂದ ತಾತ್ವಿಕ ಅನುಮೋದನೆಯನ್ನು ಸಹ ಪಡೆದುಕೊಂಡಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ತಿಂಗಳು, ಹೊಸ ಹೂಡಿಕೆದಾರರಾದ ರಿಬ್ಬಿಟ್ ಕ್ಯಾಪಿಟಲ್ ಮತ್ತು ಟಿವಿಎಸ್ ಕ್ಯಾಪಿಟಲ್ ಫಂಡ್‌ಗಳಿಂದ ಫೋನ್‌ಪೇ ಹೆಚ್ಚಿನದಾಗಿ 100 ಮಿಲಿಯನ್ ಡಾಲರ್ (ಸುಮಾರು 828 ಕೋಟಿ ರೂ.) ಪ್ರಾಥಮಿಕ ಬಂಡವಾಳವನ್ನು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!