Sunday, March 26, 2023

Latest Posts

VIRAL VIDEO| ಸಿನಿಮಾ ಸ್ಟೈಲ್‌ನಲ್ಲಿ ಲೈವ್ ಫೈರಿಂಗ್:‌ ಶೂಟೌಟ್‌ಗೆ ಸ್ಥಳೀಯರು ತತ್ತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೊಣ್ಣೆ, ಕಲ್ಲು, ಚಾಕು, ಚೂರಿ ಇವೆಲ್ಲ ಮಾಯವಾಗಿ ಅವುಗಳ ಜಾಗಕ್ಕೆ ಈಗ ಬಂದೂಕುಗಳು ಬಂದಿವೆ. ಜಗಳ ಶುರುವಾದರೆ ಸಾಕು ಗನ್ ತರೋದು ಗುಂಡು ಹಾರಿಸೋದೆ ಕಾಯಕವಾಗಿದೆ. ಈ ಭಯಾನಕ ಪರಿಸ್ಥಿತಿ ನಡೆದಿದ್ದು ಬೇರೆಲ್ಲೂ ಅಲ್ಲ ನಮ್ಮ ದೇಶದಲ್ಲೇ!.

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಅಲ್ಲಿಗೆ ಎರಡು ಕುಟುಂಬಗಳ ನಡುವಿನ ಜಗಳ ತಾರಕಕ್ಕೇರಿ ಪರಸ್ಪರ ಗುಂಡು ಹಾರಿಸಿಕೊಂಡು ಪ್ರತಿದಾಳಿ ಮಾಡಿಕೊಳ್ಳುವವರೆಗೂ ಹೊಡೆದಾಟ ನಡೆಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಶಹಜಹಾನ್‌ಪುರ ಪ್ರದೇಶದ ವೀರ್ ಪಾಲ್ ಮತ್ತು ರಿಷಿಪಾಲ್ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಇದು ಗುಂಪು ಗುಂಡಿನ ದಾಳಿಗೆ ತಿರುಗಿತು. ಒಂದು ಗುಂಪು ಮತ್ತೊಂದರ ಮೇಲೆ ಗುಂಡಿನ ದಾಳಿ ನಡೆಸಿತು. ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಗುಂಡು ಹಾರಿಸುವುದನ್ನು ನಾವು ಸಿನಿಮಾಗಳಲ್ಲಿ ನೋಡುತ್ತೇವೆ. ಆದರೆ, ಇಲ್ಲಿ ಅದು ನಿಜವಾಗಿ ನಡೆದಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!