Photo Gallery| ಚಂದ್ರಶೇಖರ ಭಂಡಾರಿ ಸ್ಮೃತಿಪಟಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾನುವಾರ ಮಧ್ಯಾಹ್ನ ಅಗಲಿದ ರಾ. ಸ್ವ. ಸಂಘದ ಜ್ಯೇಷ್ಠ ಪ್ರಚಾರಕರಾದ ಚಂದ್ರಶೇಖರ ಭಂಡಾರಿ (87) ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಬೆಳಗ್ಗೆ ಕೇಶವಕೃಪದಲ್ಲಿ ಹಲವು ಗಣ್ಯರು, ಮೃತರ ಒಡನಾಡಿಗಳು ಅಂತಿಮ ನಮನ ಸಲ್ಲಿಸಿದರು.

1935ರ ಮೇ 4ರಂದು ಜನಿಸಿದ ಚಂದ್ರಶೇಖರ ಭಂಡಾರಿ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಬಿಎಡ್ ಪದವೀಧರರಾಗಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದ ಚಂದ್ರಶೇಖರರು ಸಂಘದ ಪ್ರಚಾರಕರಾಗಿದ್ದು 1961ರಲ್ಲಿ. ಆನಂತರದ ದಿನಗಳಲ್ಲಿ ಅವರದ್ದು ದಣಿವರಿಯದ ಸಂಘಟನಾತ್ಮಕ ಸೇವೆ. ಅವರ ಮೃದುಮಾತು, ಎಲ್ಲರನ್ನೂ ಅಕ್ಕರೆಯಿಂದ ಮಾತನಾಡಿಸಿ ಸಂಘಟಿಸುವ ಗುಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಲ್ಲಿರುವ ಹಿರಿ-ಕಿರಿಯರಾದಿಯಾಗಿ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.

May be an image of 3 people, people standing and outdoors

May be an image of 1 person

1983ರಲ್ಲಿ ಹೊ ವೆ ಶೇಷಾದ್ರಿ ಅವರ ಪ್ರೇರಣೆಯಿಂದ ಸಾಹಿತ್ಯ ಸೃಷ್ಟಿಗೆ ತೊಡಗಿದರು. ಅಲ್ಲಿಂದ ಶುರುವಾಗಿ ಅನೇಕ ಜನಮನ್ನಣೆಯ ಕೃತಿಗಳನ್ನು ಹೊರತಂದರು. ‘ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು ಸುಂದರ ತಾಯ್ನೆಲವು…’ ಹಾಡಂತೂ ಲಕ್ಷಾಂತರ ಕಂಠಗಳಲ್ಲಿ ನಲಿದಾಡಿದೆ.

May be an image of 2 people, people sitting and indoor

May be an image of 7 people, people standing, tree and text that says "EXIT"

ಸಾಮಾಜಿಕ ಕಾರ್ಯಕರ್ತ ದತ್ತೋಪಂಥ ಠೇಂಗಡಿ ಅವರು ಅಂಬೇಡ್ಕರರ ಕುರಿತು ಮರಾಠಿಯಲ್ಲಿ ಬರೆದಿದ್ದ ಕೃತಿಯನ್ನು ಕನ್ನಡದಲ್ಲಿ ‘ಸಾಮಾಜಿಕ ಕ್ರಾಂತಿಸೂರ್ಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್’ ಎಂದು ಅನುವಾದಿಸಿದ ಚಂದ್ರಶೇಖರ ಭಂಡಾರಿಯವರ ಕಾರ್ಯ, ವೈಚಾರಿಕ ಸಾಹಿತ್ಯಕ್ಕೊಂದು ಬಲುದೊಡ್ಡ ಕೊಡುಗೆ

May be an image of 9 people, people standing and text that says "ಸಿಟಿಜನ್ಸ್ ಕೌನ್ನಿಲ್, ಮಂಗಳೂರು ರಾಷ್ಟೋತ್ಥಾನ ಸಾಹಿತ್ಯ, ಬೆಂಗಳೂರು ಗ್ರಂಥ ಲೋಕಾರ್ಪಣಾ ಸಮಾರಂಭ ಸಂ। ಕಾರ್ತಿಕ పుక్ష ತ್ರಯೋದಸಿ 11.2011. ಮಂಗಳವಾರ ಸಂದೆ 5.00ಕ್ಕೆ ಡಿಎಂ ಕಾನೂನು ಮಹಾವಿದ್ಯಾಲಯ ಸಾಮಾಜಿಕ ಕ್ರಾಂತಿಸೂರ್ಯ ಡಾ।। ಬಾಬಾಸಾಹೇಬ್ ಅಂಬೇಡ್ಕರ್"

May be an image of 7 people, people sitting, people standing and indoor

May be an image of 4 people, people sitting, people standing and indoor

ಸಂಘಟನೆ-ಸಾಹಿತ್ಯಸೃಷ್ಟಿಗಳಲ್ಲಿ ದಣಿವರಿಯದೇ ಕೆಲಸ ಮಾಡಿದ ಜೀವವೊಂದು ಚಿರವಿಶ್ರಾಮಕ್ಕೆ ತೆರಳಿದೆ.

May be an image of 1 person

May be an image of 4 people, people sitting and indoor

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!