Monday, September 26, 2022

Latest Posts

ಫೋಟೋ ಶೂಟ್​ ವಿವಾದ: ಪೊಲೀಸರ ಬಳಿ ನಟ ರಣವೀರ್ ಸಿಂಗ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮ್ಯಾಗಜೀನ್​ ಒಂದಕ್ಕೆ ಫೋಟೋ ಶೂಟ್​ ಮಾಡಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್​ ನಟ ರಣವೀರ್​ ಸಿಂಗ್ ಪೊಲೀಸರು ಸತತ ಎರಡು ಗಂಟೆಗಳ ವರೆಗೆ ವಿಚಾರಣೆ ನಡೆಸಿದ್ದಾರೆ.

ಮಹಿಳೆಯರ ಭಾವನೆಗೆ ಧಕ್ಕೆಯಾಗಿರುವ ಆರೋಪದಡಿ ರಣವೀರ್​ ವಿರುದ್ಧ ಮುಂಬೈ ಪೊಲೀಸರು ಎಫ್​ಐಆರ್​ ದಾಖಲಿಸಿದ್ದರು . ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್​ 509, 294 ಮತ್ತು ಐಟಿ ಕಾಯ್ದೆ 67 ಎ ಸೆಕ್ಷನ್​ ಅಡಿಯಲ್ಲಿ ಮುಂಬೈನ ಚೆಂಬೂರ್​ ಠಾಣಾ ಪೊಲೀಸರು ಎಫ್​ಐಆರ್​ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ರಣವೀರ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸತತ ಎರಡು ಗಂಟೆಗಳ ವರೆಗೆ ವಿಚಾರಣೆ ನಡೆಸಿದ್ದಾರೆ.

ಈ ರೀತಿ ಫೋಟೋಶೂಟ್​ ಮಾಡಿಸಿದೆ ಇಷ್ಟೆಲ್ಲಾ ಸಮಸ್ಯೆ ಆಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ ಹೀಗೆಲ್ಲಾ ಮಾಡುತ್ತಲೇ ಇರಲಿಲ್ಲ. ನಾನು ಬೆತ್ತಲಾಗಿರುವುದು ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗುತ್ತದೆ ಎಂದು ಊಹಿಸಿಯೂ ಇರಲಿಲ್ಲ ರಣವೀರ್​ ಸಿಂಗ್ ಎಂದಿದ್ದಾರೆ.
ನಾನು ವಿವಾದಾತ್ಮಕ ಫೋಟೋಗಳನ್ನು ಅಪ್​ಲೋಡ್ ಮಾಡಿಲ್ಲ. ಆ ಫೋಟೋಗಳು ಆ ರೀತಿಯ ಸಮಸ್ಯೆ ತರುತ್ತದೆ ಎಂದು ನಾನು ಯೋಚಿಸಿರಲಿಲ್ಲ ಎಂದು ರಣವೀರ್ ಸಿಂಗ್ ಅವರು ಪೊಲೀಸರ ಎದುರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ರಣವೀರ್​ಗೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!