CRIME| ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, 8 ಮಂದಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅತ್ಯಾಚಾರ ಪ್ರಕರಣಗಳಲ್ಲಿ ಒಂದು ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆಯುತ್ತಿದೆ. ಎಷ್ಟೇ ಕೇಸು ಹಾಕಿದರೂ, ಎಷ್ಟೇ ಶಿಕ್ಷೆ ನೀಡಿದರೂ ಬದಲಾವಣೆ ಇಲ್ಲ. ಇದೀಗ ವಿಶಾಖಪಟ್ಟಣದ ಗೋಪಾಲಪಟ್ಟಣದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. ಗೋಪಾಲಪಟ್ಟಣದ ಮುಖ್ಯರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮನೆಯಿಂದ ಎಳೆದೊಯ್ದು ಯುವಕನೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಬಳಿಕ ಬಾಲಕಿಯನ್ನು ಪ್ರಹ್ಲಾದಪುರಂನಲ್ಲಿರುವ ಮಹಿಳೆಗೆ ಒಪ್ಪಿಸಿದ್ದಾರೆ.

ಇತರ ಮೂವರು ಯುವಕರು ಅತ್ಯಾಚಾರ ನಡೆಸುವಂತೆ ಮಹಿಳೆ ಪ್ರೋತ್ಸಾಹಿಸಿದ್ದಾಳೆ. ಕೊನೆಗೂ ಅವರಿಮದ ತಪ್ಪಿಸಿಕೊಂಡ ಗೋಪಾಲಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತನಿಖೆಯ ನಂತರ, ಗೋಪಾಲಪುರಂ ಪೊಲೀಸರು ಈ ಅತ್ಯಾಚಾರ ಘಟನೆಯಲ್ಲಿ ಮಹಿಳೆ ಮತ್ತು ಇತರ ಎಂಟು ಜನರನ್ನು ಕಸ್ಟಡಿಗೆ ತೆಗೆದುಕೊಂಡರು. ಈ ಅತ್ಯಾಚಾರ ಪ್ರಕರಣದಲ್ಲಿ ವರದಿಗಾರನೂ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ.

ಎರಡು ದಿನಗಳ ಹಿಂದೆ ಅಪ್ರಾಪ್ತ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದರು. ಮನೆಯಿಂದ ಹೊರ ಬಂದ ಬಾಲಕಿಯ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!