ಪ್ರಜ್ಞೆ ತಪ್ಪಿದ ಪೈಲಟ್:‌ ವಿಮಾನವನ್ನು ಸೇಫ್‌ ಲ್ಯಾಂಡಿಂಗ್‌ ಮಾಡಿದ ಪ್ರಯಾಣಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಸೆಸ್ನಾ 208 ಕಾರವಾನ್ ವಿಮಾನದಲ್ಲಿ ಪವಾಡವೇ ನಡೆದಿದೆ. ವಿಮಾನ ನಡೆಸುತಿದ್ದ ಪೈಲಟ್‌ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ್ದಾರೆ. ಘಟನೆ ತಿಳಿದ ಪ್ರಯಾಣಿಕರಲ್ಲಿ ಭಯ ಶುರುವಾಗಿ ಎಲ್ಲರೂ ಕಿರುಚಾಡುತ್ತಿದ್ದಾರೆ. ಆದರೆ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿ ತನ್ನ ಗರ್ಭಿಣಿ ಪತ್ನಿಗೆ ಧೈರ್ಯ ತುಂಬಿ ಪೈಲೆಟ್‌ ಸೀಟಿಗೆ ಬಂದು ಕುಳಿತು ವಿಮಾನ ನಡೆಸುತ್ತಾನೆ. ನಿಜ ಅಂದರೆ ಆತನಿಗೆ ಈ ಬಗ್ಗೆ ಎಳ್ಳಷ್ಟೂ ಅನುಭವವಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಪಾಮ್ ಪೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇಫ್‌ ಲ್ಯಾಂಡಿಂಗ್‌ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರೆಲ್ಲರೂ ನಿಟ್ಟುಸಿರು ಬಿಟ್ಟರು. ಒಬ್ಬ ಸಾಮಾನ್ಯ ವ್ಯಕ್ತಿ ಮೊದಲ ಬಾರಿಗೆ ಕಾಕ್‌ಪಿಟ್‌ನಲ್ಲಿ ಕುಳಿತು ತನ್ನ ಕುಟುಂಬವನ್ನು ಮಾತ್ರವಲ್ಲ ಎಲ್ಲಾ ಪ್ರಯಾಣಿಕರನ್ನು ಉಳಿಸಿದ್ದಾನೆ ಎಂದು ಆತನನ್ನು ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!