ಪಿಂಕ್ ಬಾಲ್ ಟೆಸ್ಟ್: ಎಡವಿದ ಟೀಮ್ ಇಂಡಿಯಾ, ಮೊದಲ ಇನ್ನಿಂಗ್ಸ್ ನಲ್ಲಿ 252 ಕ್ಕೆ ಆಲೌಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯುತ್ತಿರುವ ದ್ವಿತೀಯ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಭಾರತ ಲಂಕಾ ವಿರುದ್ಧ 252 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಬಳಗಕ್ಕೆ 10 ರನ್ ಆಗುವಷ್ಟರಲ್ಲಿ ಮಯಾಂಕ್ ಅಗರ್ವಾಲ್ ರನ್ ಔಟ್ ಆಘಾತ ನೀಡಿತು.
ಬಳಿಕ ರೋಹಿತ್ ಶರ್ಮಾ ಔಟಾದರು.ಹನುಮ ವಿಹಾರಿ 31, ಕೊಹ್ಲಿ23 ರನ್ ಗಳಿಗೆ ಔಟಾದರು. ರಿಷಬ್ ಪಂತ್ 39 ರನ್ ಗಳಿಸಿ ಔಟಾದರು.
ಉತ್ತಮ ಆಟವಾಡಿದ ಶ್ರೇಯಸ್ ಅಯ್ಯರ್ ಗರಿಷ್ಠ 92 ರನ್ ಗಳಿಸಿ ಔಟಾಗುವ ಮೂಲಕ ಶತಕದ ಸಮೀಪದಲ್ಲಿ ಎಡವಿ ಭಾರಿ ನಿರಾಸೆ ಅನುಭವಿಸಿದರು.
ರವೀಂದ್ರ ಜಡೇಜಾ 4 , ರವಿಚಂದ್ರನ್ ಅಶ್ವಿನ್ 13, ಅಕ್ಷರ್ ಪಟೇಲ್ 9 , ಮೊಹಮ್ಮದ್ ಶಮಿ 5 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ ಕೊನೆಯವರಾಗಿ ಔಟಾಗದೆ ಉಳಿದರು.
ಲಂಕಾ ಪರ ಬಿಗು ದಾಳಿ ನಡೆಸಿದ ಲಸಿತ್ ಎಂಬುಲ್ದೇನಿಯ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಪಡೆದು ಮಿಂಚಿದರು. ಧನಂಜಯ ಡಿ ಸಿಲ್ವಾ 2 ಮತ್ತು ಸುರಂಗ ಲಕ್ಮಲ್ 1 ವಿಕೆಟ್ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!